ನವೋದಯ ಶಿಕ್ಷಣ ಸಂಸ್ಥೆ – ಅದ್ಧೂರಿ ಗಣೇಶನ ವಿಸರ್ಜನೆ
ರಾಯಚೂರು.ಸೆ.೦೫- ನವೋದಯ ಶಿಕ್ಷಣ ಸಂಸ್ಥೆಯಿಂದ ನವೋದಯ ಆಸ್ಪತ್ರೆಯಲ್ಲಿ ಅದ್ಧೂರಿಯಾಗಿ ಗಣೇಶನ ವಿಸರ್ಜನೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್.ರೆಡ್ಡಿ, ನವೋದಯ ಆಸ್ಪತ್ರೆ ಮೆಡಿಕಲ್ ಸೂಪರ್ ಡೆಂಟ್ ಡಾ.ಸುರೇಶ್ ಪಾಟೀಲ್, ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಮಲ್ಲಿಕಾರ್ಜುನ್ ರೆಡ್ಡಿ ಮತ್ತು ಶ್ರೀಕೃಷ್ಣ ನರ್ಸಿಂಗ್, ಆಸ್ಪತ್ರೆಯ ಮೇಲ್ವಿಚಾರಾದ ಟಿ.ಮಾರೆಪ್ಪ, ಹನುಮಂತ, ಮೆಡಿಕಲ್ ಸೋಶಿಯಲ್ ವರ್ಕರ್ ಗಂಗಾಧರ ಸ್ವಾಮಿ, ನಾಗರಾಜ, ನಲ್ಲರೆಡ್ಡಿ ಉಪಸ್ಥಿತರಿದ್ದರು.