ನ್ಯಾಷನಲ್ ಐಕಾನಿಕ ಅವಾರ್ಡ್ ಗೆ ಡಾ. ರಾಜೇಂದ್ರ.ಟಿ.ಎಲ್. ಆಯ್ಕೆ.                                              

ದೆಹಲಿ. ಸೆ.೩; ದೆಹಲಿ ಕನ್ನಡ ಸಮ್ಮೇಳನ  ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಾಡಿನ  ಪ್ರಮುಖ ಗಣ್ಯರನ್ನು ಗುರುತಿಸಿ ನ್ಯಾಷನಲ್ ಐಕಾನಿಕ ಅವಾರ್ಡ್ ಗೆ ಡಾ. ರಾಜೇಂದ್ರ.ಟಿ.ಎಲ್. ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಶ್ರೀಯುತರು ಮಲೆನಾಡಿನ ಹೆಬ್ಬಾಗಿಲು ಮತ್ತು ಮಲೆನಾಡಿನ ಸ್ವರ್ಗ ಎಂದೆ ಕರಸಿಕೊಂಡಿರುವ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ತಲ್ಲೂರು ಗ್ರಾಮದ  ಲಕ್ಷ್ಮಣಪ್ಪ ಹೆಚ್.ಮತ್ತು ಶ್ರೀಮತಿ ಬಂಗಾರಮ್ಮ ದಂಪತಿಗಳ ಪುತ್ರ  ಡಾ.ರಾಜೇಂದ್ರ ಟಿ.ಎಲ್.ಕನ್ನಡ ಉಪನ್ಯಾಸಕರು.ಇವರಿಗೆ ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಇವರ ಪ್ರತಿಭೆಯನ್ನು ಗುರುತಿಸಿ ಇವರಿಗೆ೨೦೨೨ ನೇ ಸಾಲಿನ * ನ್ಯಾಶನಲ್ ಐಕಾನಿಕ ಅವಾರ್ಡ್ * ಅನ್ನು ಸೆ. ೨೦ ರಂದು ದೆಹಲಿ ಕನ್ನಡ ಸಮ್ಮೇಳನ* ದೆಹಲಿ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರು ಬಿ.ಎನ್.ಹೊರಪೇಟಿ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.