53 ದಿನಗಳ ಧರಣಿ ಅಂತ್ಯ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಮುದ್ದೇಬಿಹಾಳ :ಸೆ.10: ಪಟ್ಟಣದ ಪುರಸಭೆ ಎದುರಿಗೆ ಕಳೆದ 53 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ,ಸ್ಥಾಯಿ ಸಮೀತಿ ಅಧ್ಯಕ್ಷ ಶಿವು ಹರಿಜನ ಅವರಿಗೆ ಶುಕ್ರವಾರ ಗ್ರೇಡ್-2 ತಹಸೀಲ್ದಾರ್ ಜಿ.ಎನ್.ಕಟ್ಟಿ ಸರಕಾರದ ಪರವಾಗಿ ಮುಖ್ಯಾಧಿಕಾರಿ ಅಮಾನತು ಆದೇಶವನ್ನು ಹಸ್ತಾಂತರಿಸುವ ಮೂಲಕ ಧರಣಿ ಅಂತ್ಯಗೊಳಿಸಲಾಯಿತು

ಈ ವೇಳೆ ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ,ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ(ಶಿವಪೂರ) ಮಾತನಾಡಿ ಪುರಸಭೆಯ ಭ್ರಷ್ಟ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸುವಂತೆ ನಾವು ನಡೆಸಿದ್ದ ಹೋರಾಟದ ಸಂದರ್ಭದಲ್ಲಿ ನಮಗೆ ಹಣದ ಆಮಿಷ ತೋರಿದ್ದರಲ್ಲದೇ ಅಹೋರಾತ್ರಿ ಧರಣಿ ಸತ್ಯಾಗ್ರಹದ ವೇಳೆ ಜೀವ ಬೆದರಿಕೆಯನ್ನೂ ಒಡ್ಡಲಾಗಿತ್ತು.ಆದರೆ ಅವೆಲ್ಲವನ್ನೂ ಲೆಕ್ಕಿಸದೇ ಮುದ್ದೇಬಿಹಾಳ ಜನತೆಯ ಆಶೀರ್ವಾದದಿಂದ ಅನ್ಯಾಯಕ್ಕೆ ಸೋಲುಂಟಾಗಿದ್ದು ನ್ಯಾಯಕ್ಕೆ ಜಯ ಸಿಕ್ಕಿದೆ ಎಂದರು.

ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಎಸ್.ಎಸ್.ಬಾಗಲಕೋಟ ಅಮಾನತುಗೊಳಿಸುವಂತೆ ಆಗ್ರಹಿಸಿ ಹಾಗೂ ವಿವಿಧ 12 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ 53 ದಿನಗಳಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹಕ್ಕೆ ಗೆಲುವು ದೊರೆತ ಹಿನ್ನೆಲೆಯಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿ ಅವರು ಜಂಟಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಹೋರಾತ್ರಿ ಧರಣಿ ನಡೆಸುತ್ತಿದ್ದ ವೇಳೆ ಪುರಸಭೆ ಕಚೇರಿ ಎದುರಿಗೆ ಮಲಗಿದ್ದಾಗ ಆಗುಂತಕರು ಬಂದು ನಮ್ಮ ಮೇಲೆ ಆಸಿಡ್ ಎರಚುತ್ತಾರೆ ಎಂದು ಭಯ ಹುಟ್ಟಿಸಿದ್ದರು.ಕೆಲವರು ಎಷ್ಟು ಹಣ ಬೇಕು ಎಂದು ನಮ್ಮನ್ನು ಹಣದ ಆಮಿಷ ಒಡ್ಡಿ ಕೊಳ್ಳಲು ಮುಂದಾಗಿದ್ದರು.ಆದರೆ ನಾವು ಭ್ರಷ್ಟಾಚಾರ ನಡೆಸಿದ ಮುಖ್ಯಾಧಿಕಾರಿ ವಿರುದ್ಧ ಕ್ರಮ ಜರುಗಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿ ಗಟ್ಟಿ ನಿಲುವಿನೊಂದಿಗೆ ಹೋರಾಟ ಮಾಡಿದ್ದರಿಂದಲೇ ಸರಕಾರ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಿ ಮೂಲ ಸ್ಥಾನಕ್ಕೆ ಕಳುಹಿಸಿದೆ ಎಂದರು.

ಈ ಹೋರಾಟಕ್ಕೆ ವಿಪ ಸದಸ್ಯ ಸುನೀಲಗೌಡ ಪಾಟೀಲ್,ಮಾಜಿ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ,ಅಸ್ಕಿ ಫೌಂಡೇಶ ಅಧ್ಯಕ್ಷ ಸಿ.ಬಿ.ಅಸ್ಕಿ,ಸಮಾಜ ಸೇವಕ ಶಾಂತಗೌಡ ಪಾಟೀಲ್ ನಡಹಳ್ಳಿ,ತಾಳಿಕೋಟಿಯ ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರ ತಂಡ,ಜೆಡಿಎಸ್ ಮುಖಂಡರು,ಕಾಂಗ್ರೆಸ್ ಪಕ್ಷದ ಮುಖಂಡರು,ದಲಿತಪರ ಸಂಘಟನೆಯವರು,ಕಿರಾಣಿ,ಬಜಾರ್ ವರ್ತಕರು,ವಿವಿಧ ಸಂಘ ಸಂಸ್ಥೆಗಳು,ನಗರದ ನಾಗರಿಕರು ತಮ್ಮ ಬೆಂಬಲ ಕೊಟ್ಟಿದ್ದಾರೆ.ವಿಶೇಷವಾಗಿ ಮಾಧ್ಯಮದವರು ನಮ್ಮ ಹೋರಾಟಕ್ಕೆ ಸ್ಫೂರ್ತಿ ತುಂಬಿದ್ದು ಅವರಿಗೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ,ಪುರಸಭೆ ಸದಸ್ಯರೇ ಹೋರಾಟ ಮಾಡುತ್ತಿದ್ದರೂ ಸೌಜನ್ಯಕ್ಕಾದ್ರೂ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಹೋರಾಟಗಾರರನ್ನು ಭೇಟಿ ಮಾಡದೇ ಇರುವುದು ಖಂಡನೀಯ.ಪ್ರಜಾಪ್ರಭುತ್ವದಲ್ಲಿ ಶಾಸಕರಾದವರು ಎಲ್ಲರನ್ನೂ ಸಮಾನವಾಗಿ ಕಾಣಬೇಕಿತ್ತು ಬ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಮೂಲಕ ಬ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ. ಇನ್ನುಮುಂದೆ ತಾಲೂಕಿನ ಹಲವಾರು ಇಲಾಖೆಯಲ್ಲಿ ಬ್ರಷ್ಟಾಚಾರ ತಾಂಡವವಾಡುತ್ತಿದೆ ಅವುಗಳನ್ನೇಲ್ಲವನ್ನು ಬಯಲಿಗೆಳೆದು ಸಾರ್ವಜನಿಕರಿಗೆ ತಿಳಿಯುವಂತೆ ಮಾಡಲಾಗುವುದು ಎಂದು ಹೇಳಿದರು.

ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಮಾತನಾಡಿ, ಇಂದು ಕೆಲವರು ಸತ್ಯಾಗ್ರಹಿಗಳೆಂದರೆ ದುಡ್ಡಿಗೆ ಮಾಡುತ್ತಾರೆ ಎನ್ನುವ ಭಾವನೆ ಇದೆ.ಆದರೆ ನಮ್ಮ ಸ್ನೇಹಿತರು ಅಂತಹ ದುಡ್ಡಿಗೆ ಆಸೆ ಬಿದ್ದಿದ್ದರೆ ಮೂರೇ ದಿನದಲ್ಲಿ ಈ ಹೋರಾಟ ಮುಗಿಸಿಬಿಡಬಹುದಿತ್ತು.ಆದರೆ ನಾವು ಸತ್ಯ,ನ್ಯಾಯಕ್ಕಾಗಿ ಹೋರಾಟ ಮಾಡಿದ್ದೇವೆ ಎಂದು ಹೇಳಲು ಖುಷಿ ಆಗುತ್ತದೆ ಎಂದು ಹೋರಾಟಗಾರರನ್ನು ಅಭಿನಂದಿಸಿದರು.ಹಿರಿಯ ಕಾಂಗ್ರೆಸ್ ಮುಖಂಡ ಎಂ.ಬಿ.ನಾವದಗಿ,ಏಪಿಎಂಸಿ ಮಾಜಿ ಉಪಾಧ್ಯಕ್ಷ ವಾಯ್.ಎಚ್.ವಿಜಯಕರ್,ಅಣ್ಣಯ್ಯ ಶಿವಯೋಗಿಮಠ,ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಮಾತನಾಡಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ.ವ್ಯವಸ್ಥೆಯಲ್ಲಿರುವ ಕಾನೂನುಗಳ ಪಾಲನೆಯ ಬಗ್ಗೆ ಅಧಿಕಾರಿ ವರ್ಗ ಅರ್ಥ ಮಾಡಿಕೊಂಡು ಜನರಿಗೆ ಸೇವೆ ಕೊಡಬೇಕಿದೆ ಎಂಬುದು ಈ ಹೋರಾಟದಿಂದ ಬಂದಿರುವ ಸಂದೇಶ ಎಂದು ಹೇಳಿದರು.

ಉಪಾಧ್ಯಕ್ಷೆ ಶಹಜಾದಬಿ ಹುಣಸಗಿ,ಸದಸ್ಯರಾದ ಮಹ್ಮದರಫೀಕ ದ್ರಾಕ್ಷಿ,ಸದಸ್ಯೆ ಭಾರತಿ ಪಾಟೀಲ್,ಪ್ರೀತಿ ದೇಗಿನಾಳ,ಅಲ್ಲಾಭಕ್ಷ್ಯ ಢವಳಗಿ,ಹಣಮಂತ ಭೋವಿ,ಯಲ್ಲಪ್ಪ ನಾಯ್ಕಮಕ್ಕಳ,ಮಾಜಿ ಸದಸ್ಯ ಮುತ್ತು ರಾಯಗೊಂಡ,ಮುಖಂಡ ಹುಸೇನ್ ಮುಲ್ಲಾ,ಸಂಗಪ್ಪ ಮೇಲಿನಮನಿ,ಸಂತೋಷ ನಾಯ್ಕೋಡಿ,ಮಾರುತಿ ಹಿಪ್ಪರಗಿ,ಯಾಸೀನ್ ಅತ್ತಾರ,ಎಂ.ಎ.ಮಕಾಶಿ,ಯಾಸೀನ್ ಅತ್ತಾರ,ಎಂ.ಎಚ್.ಹುರಕಡ್ಲಿ,ಎ.ಕೆ.ಗುಡ್ನಾಳ,ಪುರಸಭೆ ಸದಸ್ಯರು,ವಿವಿಧ ಸಂಘ ಸಂಸ್ಥೆಗಳ ಮುಖಂಡರು ಇದ್ದರು.ಕಣ್ಣೀರು ಹಾಕಿದ ಸದಸ್ಯ: ನಮ್ಮ ಹೋರಾಟವನ್ನು ಬೆಂಬಲಿಸಿದ ಇಡೀ ಮುದ್ದೇಬಿಹಾಳದ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳುವ ಸಂದರ್ಭ ಭಾವುಕರಾದ ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ,ನಮ್ಮ ಜೀವ ಒತ್ತೆ ಇಟ್ಟು ಹೋರಾಟ ಮಾಡಿದ್ದಕ್ಕೆ ನಮಗೆ ನ್ಯಾಯ ಸಿಕ್ಕಿದೆ ಎಂದು ಕಣ್ಣೀರು ಹಾಕಿದರು.ಅಲ್ಲದೇ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಭಂಡತನದಿಂದ ಭ್ರಷ್ಟ ಅಧಿಕಾರಿಯ ರಕ್ಷಣೆಗೆ ನಿಂತಿದ್ದರು.ಪುರಸಭೆಯಿಂದ ಹೋಗುವ ಕಮೀಷನ್ ಇನ್ನು ಮುಂದೆ ಅವರಿಗೆ ನಿಲ್ಲಸಿದ ತೃಪ್ತಿ ನಮಗಿದೆ ಎಂದರಲ್ಲದೇ ಪುರಸಭೆ ಎದುರಿಗೆ ತಿರುಗಾಡಿದರೂ ಶಾಸಕರು ಸೌಜನ್ಯಕ್ಕೆ ಹೋರಾಟಗಾರರನ್ನು ಭೇಟಿ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ವಿಜಯೋತ್ಸವ : ಪುರಸಭೆ ಸದಸ್ಯ ಮಹೆಬೂಬ ಗೊಳಸಂಗಿ,ಸ್ಥಾಯಿ ಸಮಿತಿ ಅಧ್ಯಕ್ಷ ಶಿವು ಹರಿಜನ ಅವರ ಹೋರಾಟಕ್ಕೆ ಗೆಲುವು ದೊರೆತಿದ್ದಕ್ಕೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ,ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಅಲ್ಲದೇ ಹೋರಾಟಗಾರರ ಮುಖದಲ್ಲಿ ಸಂತಸ ಮನೆ ಮಾಡಿತ್ತು.ಮುದ್ದೇಬಿಹಾಳದ ಇತಿಹಾಸದಲ್ಲಿ ಹಿಂದೆ ಶಾಸಕರಿದ್ದ ಸಿ.ಎಸ್.ನಾಡಗೌಡ ಅವರ ಅವಧಿಯಲ್ಲಿ ಹದಗೆಟ್ಟಿದ್ದ ಆಲಮಟ್ಟಿ ಮುದ್ದೇಬಿಹಾಳ ರಸ್ತೆ ದುರಸ್ತಿಗೆ ನಡೆದಿದ್ದ ಹೋರಾಟದ ನಂತರ ಇದು ಅತೀ ಹೆಚ್ಚು ದಿನಗಳನ್ನು ಪಡೆದುಕೊಂಡ ಹೋರಾಟವಾಗಿ ದಾಖಲೆ ನಿರ್ಮಿಸಿದೆ ಎಂದು ಜನರು ಮಾತನಾಡಿಕೊಂಡರು.