525ನೇ ದಿನಕ್ಕೆ ಮುಂದುವರೆದ ಏಮ್ಸ್ ಹೋರಾಟ

ರಾಯಚೂರು,ಅ.19- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 525 ನೇ ದಿನಕ್ಕೆ ಮುಂದುವರೆದಿದೆ.

ವಿಶೇಷ ಸ್ಥಾನಮಾನ ಮತ್ತು ರೋಗಗ್ರಸ್ತ ಜಿಲ್ಲೆ, 371 ಜೆ  ವಿಶೇಷ ಸ್ಥಾನಮಾನ ಕೆ ಒಳಪಟ್ಟ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ಧರಣಿ ಸತ್ಯಾಗ್ರಹದಲ್ಲಿ ಅಶೋಕ್ ಕುಮಾರ್  ಜೈನ್,  ಕಾಮರಾಜ್ ಪಾಟೀಲ್, ನರಸಪ್ಪ ಬಾಡಿಯಾಳ್, ಗುರುರಾಜ್ ಕುಲಕರ್ಣಿ, ಎನ್. ಮಹಾವೀರ್, ಎಸ್. ತಿಮ್ಮಾರೆಡ್ಡಿ, ಸಾದಿಕ ಖಾನ್, ಮಾನ್ಸಿಂಗ್ ಠಾಕೂರ್,  ವೆಂಕಟರೆಡ್ಡಿ ದಿನ್ನಿ, ಉದಯ್ ಕುಮಾರ್,ವೀರ ಸಿದ್ದಯ್ಯ ಸ್ವಾಮಿ, ಮಹೇಂದ್ರ ಸಿಂಗ್,ವಿಶ್ವ,ಅಜೀಜ್ ಮುಂತಾದವರು ಭಾಗವಹಿಸಿದ್ದರು.