52,253 ಮಂದಿ ಚೇತರಿಕೆ 401 ಸಾವು, 22823 ಜನರಿಗೆ ಸೋಂಕು

ಬೆಂಗಳೂರು, ಮೇ.28-ರಾಜ್ಯದಲ್ಲಿ ಕೆಲ ದಿನಗಳಿಂದ ಗುಣಮುಖರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂದು 52253 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ 2146621 ಮಂದಿ ಚೇತರಿಕೆ ಕಂಡಿದ್ದಾರೆ.
22823ಮಂದಿಗೆ ಹೊಸ ಸೋಂಕು ತಗುಲಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳು 372373 ಕ್ಕೆ ಏರಿಕೆಯಾಗಿದೆ.
ಆದರೆ ರಾಜ್ಯದಲ್ಲಿ ಸಾವಿನ‌ ಪ್ರಮಾಣ ನಿನ್ನೆಗಿಂತ ಇಳಿಕೆಯಾಗಿದ್ದು. ಇಂದು ರಾಜ್ಯದಲ್ಲಿ 401 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸತ್ತವರ ಸಂಖ್ಯೆ 27806 ಕ್ಕೆ ಏರಿಕೆಯಾಗಿದೆ. ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 2546821 ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಒದಗಿಸಿದೆ.
ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಇಂದು 192 ಮಂದಿ ಸೋಂಕಿಗೆ ಬಲಿಯಾಗಿದ್ದರು. ನಿನ್ನೆ ನಗರದಲ್ಲಿ 273 ಮಂದಿ ಮೃತಪಟ್ಟಿದ್ದರು. ಇದರೊಂದಿಗೆ ಒಟ್ಡು ಮೃತರ ಸಂಖ್ಯೆ 12631 ಕ್ಕೆ ಹೆಚ್ವಳವಾಗಿದೆ.
ಇಂದು 5736 ಮಂದಿಗೆ ಹೊಸ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 1149614 ಕ್ಕೆ ಹೆಚ್ವಳವಾಗಿದೆ. ಇಂದು ನಗರದಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚಳವಾಗಿದ್ದು ಇಂದು 31237 ಮಂದಿ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ 956303 ಮಂದಿ ಗುಣಮುಖರಾಗಿದ್ದಾರೆ. ನಗರದಲ್ಲಿ ಇಂದು ಸಕ್ರಿಯ ಪ್ರಕರಣಗಳು 180697ಕ್ಕೆ ಹೆಚ್ವಳವಾಗಿದೆ.
ಜಿಲ್ಲೆಗಳ ವಿವರ ಹೀಗಿದೆ:
ಬಾಗಲಕೋಟೆ 252, ಬಳ್ಳಾರಿ 782, ಬೆಳಗಾವಿ 1319, ಬೆಂಗಳೂರು ಗ್ರಾಮಾಂತರ 514, ಬೆಂಗಳೂರು ನಗರ 5736, ಬೀದರ್ 64, ಚಾಮರಾಜನಗರ 318, ಚಿಕ್ಕಬಳ್ಳಾಪುರ 337, ಚಿಕ್ಕಮಗಳೂರು 519, ಚಿತ್ರದುರ್ಗ 489, ದಕ್ಷಿಣಕನ್ನಡ 799, ದಾವಣಗೆರೆ ,522, ಧಾರವಾಡ 700, ಗದಗ 302, ಹಾಸನ 1170, ಹಾವೇರಿ 137, ಕಲಬುರಗಿ 191, ಕೊಡಗು 245, ಕೋಲಾರ 656, ಕೊಪ್ಪಳ 339, ಮಂಡ್ಯ 825, ಮೈಸೂರು 1677, ರಾಯಚೂರು 365, ರಾಮನಗರ 339, ಶಿವಮೊಗ್ಗ 1135, ತುಮಕೂರು 1326, ಉಡುಪಿ 766, ಉತ್ತರಕನ್ನಡ 692, ವಿಜಯಪುರ 183 ಮತ್ತು ಯಾದಗಿರಿ ಜಿಲ್ಲೆಯಲ್ಲಿ 184 ಪ್ರಕರಣಗಳು ದಾಖಲಾಗಿವೆ.