ನವೆಂಬರ್‌ನಲ್ಲಿ ದುಬೈನಲ್ಲಿ ನಡೆಯಲಿರುವ ವಿಶ್ವ ಕನ್ನಡ ಹಬ್ಬಕ್ಕೆ ಅತಿಥಿಯಾಗಿ ಆಗಮಿಸುವಂತೆ ನಟ ರಮೇಶ್ ಅರವಿಂದ್ ಅವರ ನಿವಾಸಕ್ಕೆ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಅಧ್ಯಕ್ಷ ಡಾ. ಟಿ. ಶಿವಕುಮಾರ್ ನಾಗರನವಿಲೆಯವರು ತೆರಳಿ ಪುಷ್ಪಗುಚ್ಛ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಪ್ರಸಾದ್ ಶೆಟ್ಟಿ, ರವಿಸಂತು, ಮಂಜುಳಾ ಪಾವಗಡ, ಭರತ್ ಜಾಕ್ ಉಪಸ್ಥಿತರಿದ್ದರು.