ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪಟ್ಟಣದೆಲ್ಲೆಡೆ ವ್ಯಾಪಾರದ ಬಿರುಸು ಹೆಚ್ಚಾಗಿದ್ದು, ಪಟ್ಟಣದ ಬಸ್ ನಿಲ್ದಾಣದಲ್ಲಿ ಯಡ್ಡಾ-ದಿಡ್ಡಿಯಾಗಿ ಕಾರುಗಳನ್ನು ನಿಲ್ಲಿಸಿದ್ದು, ಬೆಂಗಳೂರು, ಹೊಸಕೋಟೆ, ಶಿಡ್ಲಘಟ್ಟ, ಕಡೆಗೆ ಹೋಗುವ ಬಸ್ಸುಗಳು ನಿಲ್ಲಲೂ ಸಹ ಜಾಗವಿಲ್ಲದೇ, ಬಸ್ಸುಗಳನ್ನು ತಿರುಗಿಸಿಕೊಳ್ಳಲು ಸಾಧ್ಯವಾಗದೇ, ಟ್ರಾಫಿಕ್ ಜಾಮ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗಿತ್ತು.