52 ಸಾವಿರ ರೂ.ಮೌಲ್ಯದ 24 ಕೆಜಿ ಗಾಂಜಾ ಜಪ್ತಿ

ಕಲಬುರಗಿ,ನ.7-ಎಸ್.ಪಿ, ಹೆಚ್ಚುವರಿ ಎಸ್.ಪಿ, ಚಿಂಚೋಳಿ ಡಿ.ಎಸ್.ಪಿ ಹಾಗೂ ಚಿಂಚೋಳಿ ಸಿಪಿಐ ಅವರ ಮಾರ್ಗದರ್ಶನದಲ್ಲಿ ಕೊಂಚಾವರಂ ಪಿ.ಎಸ್.ಐ ಇಂದಿರಾಬಾಯಿ ಮತ್ತು ಎ.ಎಸ್.ಐ ಶರಣಪ್ಪ ಹಾಗೂ ಸಿಬ್ಬಂದಿಗಳಾದ ರಾಜು, ಮಂಜುನಾಥ, ವಿಶ್ವನಾಥ, ಸಂತೋಷ, ಮಲ್ಲಪ್ಪ ಅವರು ಸೇರಿ ದಾಳಿ ನಡೆಸಿ ಅಂತವರಂ ಗ್ರಾಮದ ಹೊಲದಲ್ಲಿ ಗಾಂಜಾ ಬೆಳೆದ ಮಾಹಿತಿ ಮೇಲೆ ದಾಳಿ ನಡೆಸಿ ಅಂತವರಂ ಗ್ರಾಮದ ರಾಜು ತಂದೆ ಅಂಜಣ್ಣ ಎಂಬಾತನನ್ನು ಬಂಧಿಸಿ 52 ಸಾವಿರ ರೂಪಾಯಿ ಮೌಲ್ಯದ 24 ಕೆಜಿ ಗಾಂಜಾ ಜಪ್ತಿ ಮಾಡಿದ್ದಾರೆ.
ಈ ಸಂಬಂಧ ಆರೋಪಿ ವಿರುದ್ಧ ಕೊಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.