52ನೇ ಪುರುಷರ ರಾಷ್ಟ್ರೀಯ ಹ್ಯಾಂಡಬಾಲ್ ಚಾಂಪಿಯನ್ ಶಿಫ್ ಜಿಲ್ಲೆಯಿಂದ 4 ಕ್ರೀಡಾಪಟುಗಳು ರಾಜ್ಯ ತಂಡಕ್ಕೆ ಆಯ್ಕೆ

ಕಲಬುರಗಿ:ಮಾ.11: ಹ್ಯಾಂಡಬಾಲ್ ಫೌಡೇಶನ್ ಆಫ್ ಇಡಿಯಾ ಅವರು ಮಾರ್ಚ್ 31 ರಿಂದ ಏಪ್ರಿಲ್ 4 ರ ವರೆಗೆ ಬಿಹಾರ ರಾಜ್ಯದ ಬೆಗರಾಯಿಯಲ್ಲಿ ಆಯೋಜಿಸುತಿರುವ 52ನೇ ಪುರುಷರ ರಾಷ್ಟ್ರೀಯ ಹ್ಯಾಂಡಬಾಲ್ ಚಾಂಪಿಯನ್ ಶಿಫ್ 2023-24 ಗೆ ಕರ್ನಾಟಕ ತಂಡ ಆಯ್ಕೆಯಾಗಿದ್ದಾರೆ.
ಈ ಆಯ್ಕೆಯ ಪ್ರಕ್ರಿಯು ನಗರದ ಚಂದ್ರಶೇಖರ ಪಾಟೀಲ ಹ್ಯಾಂಡಬಾಲ್ ಆಂಕರಣದಲ್ಲಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಗುಲಬರ್ಗಾ ಜಿಲ್ಲಾ ಹ್ಯಾಂಡಬಾಲ್ ಅಸೋಶಿಯೇಷನ್ ಅವರ ಸಹಯೋಗದೋಂದಿಗೆ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು, ಆಗಮಿಸಿ ಭಾಗವಹಿಸಿದರು. ಇದರಲ್ಲಿ ಕೌಶಲ್ಯಾ ಭರಿತ 16 ಕ್ರಿಡಾಪಟುಗಳು ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಕಲಬುರಗಿ ಜಿಲ್ಲೆಯಿಂದ 4 ಕ್ರೀಡಾಪಟುಗಳು ಇವರುವರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮೃತ ಅಷ್ಟಗಿ, ಗುಲಬರ್ಗಾ ಜಿಲ್ಲಾ ಹ್ಯಾಂಡಬಾಲ್ ಅಸೋಶಿಯೇಷನ್ ಅಧ್ಯಕ್ಷ ಈರಣ್ಣಾ ಪಾಟೀಲ ಝಳಕಿ, ಆಯೋಜಕರು ಮತ್ತು ಕಾರ್ಯದರ್ಶಿ ದತ್ತಾತ್ರೇಯ ಪಾಟೀಲ ಜೇವರ್ಗಿ, ಉಮೇಶ ಶರ್ಮಾ, ಪ್ರವೀಣ ಪುಣೆ, ತಿಲಕರಾಜ್ ಇದ್ದರು.