ಗೋವಿಂದರಾಜ ನಗರ ಕ್ಷೇತ್ರದ ನಾಯಂಡಳ್ಳಿ ವಾರ್ಡ್‌ನಲ್ಲಿ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬೋರ್‌ವೆಲ್‌ಗಳನ್ನು ಕೊರೆಯುವ ಕಾಮಗಾರಿಗಳಿಗೆ ವಸತಿ ಸಚಿವ ವಿ. ಸೋಮಣ್ಣ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥ್‌ಗೌಡ, ವಾರ್ಡ್ ಅಧ್ಯಕ್ಷ ಹರೀಶ್, ಮುಖಂಡರುಗಳಾದ ರಾಜು, ಮಂಡ್ಯ ವೆಂಕಟೇಶ್, ವಜ್ರಪ್ಪ, ಕೃಷ್ಣಪ್ಪ ಇದ್ದಾರೆ.