ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ಕುಮಾರ ಭಜಂತ್ರಿಯವರನ್ನು ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಈಶ್ವರ ಗಾಣಿಗೇರ ನೇತೃತ್ವದಲ್ಲಿ ಧಾರವಾಡ ತಾಲೂಕಿನ ನರೇಂದ್ರ ಸರಕಾರಿ ಪ್ರೌಢಶಾಲೆಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಗ್ರಾಪಂ.ಅಧ್ಯಕ್ಷೆ ಗಂಗಮ್ಮ ನಿರಂಜನ, ಉಪಾಧ್ಯಕ್ಷ ತಿರಕಯ್ಯ ಹಿರೇಮಠ, ಸದಸ್ಯರು, ಹಿರಿಯರಾದ ಮಂಜುನಾಥ ತಿರ್ಲಾಪೂರ, ಬಸವರಾಜ ವೆಂಕಟಾಪೂರ, ಈರಪ್ಪ ತೇಗೂರ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.