ರಾಜ್ಯ ಸರ್ಕಾರ ಜನನ-ಮರಣ ನೊಂದಣಿ ಕಾಯ್ದೆ ಬಗ್ಗೆ ಹೊರಡಿಸಿದ ಅಧಿಸೂಚನೆಯನ್ನು ಹಿಂಪಡೆದು ಮೊದಲಿನ ಹಾಗೆ ಜೆಎಂಎಫ್’ಸಿ ನ್ಯಾಯಾಲಯಕ್ಕೆ ಅಧಿಕಾರ ನೀಡಬೇಕೆಂದು ತಾಲೂಕಾ ನ್ಯಾಯವಾದಿಗಳ ಸಂಘದಿಂದ ಬ್ಯಾಡಗಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಹಾಗೂ ಕಾನೂನು ಸಚಿವರಿಗೆ ತಹಶೀಲ್ದಾರರ ಮೂಲಕ ಮನವಿ ಸಲಿಸಲಾಯಿತು.