ಹತ್ಯೆಗಳ ಮೂಲಕ ಅಶಾಂತಿ ನಿರ್ಮಿಸುತ್ತಿರುವ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಭಾವಿಪ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಅರುಣ ಅಮರಗೋಳ, ನಗರ ಕಾರ್ಯದರ್ಶಿ ಉಲ್ಲಾಸ ಗೋಡಿ, ವಿದ್ಯಾನಂದ ಸ್ಥಾವರಮಠ, ವೆಂಕಟೇಶ ಲಮಾಣಿ, ಸಚೀನ ಹಿರೇಮಠ, ವಿನೋದ ಸತ್ತಿಗೇರಿ, ಪ್ರದಿಪ ಹೋಳಲದ ಸೇರಿದಂತೆ ಹಲವರು ಇದ್ದರು.