ಚಿಂಚೋಳಿ: ತಾಲೂಕಿನ ದೇಗಲಮಡಿ ಗ್ರಾಮದ ನಡೆದಾಡುವ ದೇವರೆಂದು ಪ್ರಸಿದ್ಧರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಅವಧೂತ ಶ್ರೀಗಳÀ 44ನೇ ಜನ್ಮದಿನಾಚರಣೆ ಅಂಗವಾಗಿ ಚಿಂಚೋಳಿ ತಾಲೂಕ ವೀರಶೈವ ಲಿಂಗಾಯತ್ ಸಮಾಜ ವತಿಯಿಂದ ಪೂಜ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕ ಯುವ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ವೀರಶೈವ ಸಮಾಜದ ಮುಖಂಡರಾದ ಆನಂದ್ ಹಿತ್ತಲ, ಸಂಪತ್ ಮುಸ್ತರಿ, ಜಗ್ಗು ಸಾಲಿಬೀರನಳ್ಳಿ, ಸಂತೋಷ್ ಪಾಟೀಲ್ ಬೇಕರಿ, ಇದ್ದರು.