ಕೊರೋನಾ ಸೋಂಕಿನಿಂದ ಆರು ಜನ ನಿಧನ:513 ಪಾಸಿಟಿವ್

ಕಲಬುರಗಿ.ಏ.19: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ‌ ಆರು ಜನ ನಿಧನರಾಗಿದ್ದಾರೆ ಎಂದು ಸೋಮವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಕಲಬುರಗಿಯ ದರ್ಗಾ ರಸ್ತೆಯ ಚೋಟಾ ರೋಜಾ ಪ್ರದೇಶದ 31 ವರ್ಷದ ಯುವಕ (ರೋಗಿ ಸಂ.1100845) ಏ.15 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.16ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ‌ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಕಾಶಿ‌ಕಮಲ್ ಅಪಾರ್ಟ್ ಮೆಂಟ್ ನಿವಾಸಿ 56 ವರ್ಷದ ಮಹಿಳೆ (ರೋಗಿ ಸಂ.1120710) ಏ.11 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.17ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಕಲಬುರಗಿಯ ಹಳೇ ಜೇವರ್ಗಿ ರಸ್ತೆಯ ಬಾಲಾಜಿ ನಗರದ 60 ವರ್ಷದ ವೃದ್ಧ (ರೋಗಿ ಸಂ.1125671) ಏ.19 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ‌ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಆಳಂದ ಪಟ್ಟಣದ ಶ್ರೀ ರಾಮ ಮಾರ್ಕೆಟ್ ಪ್ರದೇಶದ 70 ವರ್ಷದ ವೃದ್ಧ (ರೋಗಿ ಸಂ.1136607) ಏ.16 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಜೊತೆಗೆ‌ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ಶೇಖ್ ರೋಜಾ ಪ್ರದೇಶದ ಆಶ್ರಯ ಕಾಲೋನಿಯ 62 ವರ್ಷದ ವೃದ್ಧ (ರೋಗಿ ಸಂ.1144724) ಏ.15 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿ ಏ.17ಕ್ಕೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ಮತ್ತು ಶ್ವಾಸಕೋಶ‌ ಸಮಸ್ಯೆಯಿಂದ ಬಳಲುತ್ತಿದ್ದ ಅಫಜಲಪೂರ ತಾಲೂಕಿನ ದೇವಲ ಗಾಣಗಾಪೂರದ 55 ವರ್ಷದ ಪುರುಷ (ರೋಗಿ ಸಂ.1192027) ಏ.14 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಏ.17ಕ್ಕೆ ನಿಧನ ಹೊಂದಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಸೋಂಕಿನಿಂದ 384 ಜನ ನಿಧನರಾಗಿದ್ದಾರೆ
ಇಂದು ಪ್ರಕಟವಾದ ಆರೋಗ್ಯ ಬುಲೆಟಿನ್ ನಲ್ಲಿ 513 ಪಾಸಿಟಿವ್ ಪ್ರಕರಣ ವರದಿಯಾಗಿದ್ದು , ಒಟ್ಟು ಕಲಬುರಗಿಯಲ್ಲಿ ಇದರೊಂದಿಗೆ 30061 ಪಾಸಿಟಿವ್ ಕೇಸ್ ಗ ಲಾದಂತಾಗಿದೆ. 219 ಜನ ಆಸ್ಪತ್ರೆ ಯಿಂದ ಇಂದು ಬಿಡುಗಡೆಯಾಗಿದ್ದಾರೆ. ಈ ವರೆಗೆ 25608 ಜನ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.4069 ಜನ ಸಕ್ರಿಯ ರೋ ಗಿಗಳು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.