ಹುಬ್ಬಳ್ಳಿಯ ನಾಗಲಿಂಗ ನಗರದಲ್ಲಿರುವ ಶ್ರೀ ರಾಜ ವಿದ್ಯಾಶ್ರಮದ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳ, ಶ್ರೀ ರಾಜ ವಿದ್ಯಾಶ್ರಮದ ಮಠದ ಪೀಠಾಧ್ಯಕ್ಷರು ಷಡಕ್ಷರಿ ಮಹಾಸ್ವಾಮಿಜಿ ಅವರ ಜನ್ಮದಿನದ ಅಂಗವಾಗಿ ಇಲ್ಲಿನ ವಿದ್ಯಾಶ್ರಮದಲ್ಲಿ ಗುರೂಜಿ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರಾಘವೇಂದ್ರ ಪೂಜಾರ್ ಗುರೂಜಿ, ರಾಜು ಗುರು ಸ್ವಾಮೀಜಿ, ಹರೀಶ್ ಜಂಗಲಿ, ಅಶೋಕ ಕಟ್ಟಿಮನಿ, ಸಂಜು ಜಂಗಲಿ, ಕಿಶನ್ ಬಿಲಾನಾ, ನಾಗಪ್ಪ ಬಿಲಾನಾ, ಕಂಡೊಬಾ ಕಳಸಣ್ಣವರ, ಪ್ರಕಾಶ್ ವಜ್ಜಣ್ಣವರ, ವಿಶಾಲ್ ಪೂಜಾರ್, ಲೀಲಾವತಿ ಪಾಸ್ತೆ, ಅಕ್ಕಮಾದೇವಿ ಬಾಗ್ಯವಾಡಿ ಉಪಸ್ಥಿತರಿದ್ದರು.