ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಮಹಾದಾಯಿಗಾಗಿ ಮಹಾ ವೇದಿಕೆ ವತಿಯಿಂದ ರೈತರ ಬೃಹತ್ ಸಮಾವೇಶವನ್ನು ನವಲಗುಂದ ಪಟ್ಟಣದಲ್ಲಿಂದು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪಂಚಮಸಾಲಿ ಮೃತ್ಯುಂಜಯ ಸ್ವಾಮಿಗಳು ಮಾತನಾಡುತ್ತಿರುವುದು. ಹೈಕೋರ್ಟ್ ನ್ಯಾಯವಾದಿಗಳಾದ ಸಿ.ಎಸ್. ಪಾಟೀಲ್, ಪಕ್ಷಾತೀತ ಹೋರಾಟ ವೇದಿಕೆಯ ಅಧ್ಯಕ್ಷ ಲೋಕನಾಥ್ ಹೆಬಸೂರ, ಶಂಕ್ರಣ್ಣ ಅಂಬಲಿ, ರಾಜಶೇಖರ್ ಮೆಣಸಿನಕಾಯಿ, ಚಿತ್ರದುರ್ಗದ ರವೀಂದ್ರ ಸೇರಿದಂತೆ ರೈತ ಮುಖಂಡರುಗಳು ಉಪಸ್ಥಿತರಿದ್ದರು.