ನವಲಗುಂದದಲ್ಲಿ ಇತ್ತೀಚೆಗೆ ಗೋಡೆ ಕುಸಿತದಿಂದ ನಿಧನರಾದ ಶಿವಪ್ಪ ತೋಟದ ಪತ್ನಿ ಶಾಂತವ್ವ ತೋಟದ ಕುಟುಂಬಕ್ಕೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಐದು ಲಕ್ಷ ರೂಗಳ ಪರಿಹಾರದ ಚೆಕ್ ವಿತರಿಸಿದರು. ತಹಶೀಲ್ದಾರ ಅನೀಲ ಬಡಿಗೇರ, ಮುಖಂಡರಾದ ಅಣ್ಣಪ್ಪ ಬಾಗಿ, ಎಸ್. ಬಿ. ದಾನಪ್ಪಗೌಡರ, ಬಸಣ್ಣ ಬೆಳವಣಿಕಿ, ಪ್ರಭು ಇಬ್ರಾಹಿಮಪುರ ಉಪಸ್ಥಿತರಿದ್ದರು.