ಹುಬ್ಬಳ್ಳಿ, ಜು20: ಆಕ್ಸಪರ್ಡ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಿಯೋಜಿಸಿದ ರಕ್ತದಾನ ಹಾಗೂ ನೇತ್ರಧಾನ ಶಿಬಿರವನ್ನು ವಸಂತ ಬಿ. ಹೊರಟ್ಟಿ ಇವರ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿತ್ತು.
ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ, ಪಾಲಿಕೆಯ ಸದಸ್ಯರಾದ ಸಂತೋಷ ಚವ್ಹಾಣ ಹಾಗೂ ಇನ್ನೋರ್ವ ಪಾಲಿಕೆಯ ಸದಸ್ಯರಾದ ತಿಪ್ಪಣ್ಣ ಮಜ್ಜಗಿ ಇವರೊಂದಿಗೆ ಆಕ್ಸ್‍ಪರ್ಡ ಮಹಾವಿದ್ಯಾಲಯದ ಚೇರಮನ್ನರಾದ ವಸಂತ ಬಿ ಹೊರಟ್ಟಿಯವರು ಉಪಸ್ಥಿತರಿದ್ದರು.
ವಸಂತ ಹೊರಟ್ಟಿಯವರು ತಮ್ಮ ಭಾಷಣದಲ್ಲಿ ನೇತ್ರದಾನಕ್ಕಿಂತ ದೊಡ್ಡದ್ದಾದ ದಾನ ಯಾವದು ಇಲ್ಲ ಎಂದು ಹೇಳಿ ಪ್ರತಿಯೋಬ್ಬರು ತಮ್ಮ ಹುಟ್ಟು ಹಬ್ಬದ ದಿನದಂದು ಆqಂÀಬರದ ಆಚರಣೆಯನ್ನು ಬಿಟ್ಟು ಇಂತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ತಿಳಿಸಿದರು.
ರಾಷ್ಟೋತ್ಥಾನ ಸಂಸ್ಥೆಯವರು ರಕ್ತದಾನ ಹಾಗೂ ಎಮ್. ಎಮ್. ಜೋಶಿ ನೇತ್ರಾಲಯ ಇವರುಗಳ ಸಂಯೋಗದಲ್ಲಿ ಸುಮಾರು 70 ಜನರು ರಕ್ತದಾನ ಹಾಗೂ ಸುಮಾರು 30 ಜನರು ನೇತ್ರದಾನದ ನೋಂದಣಿ ಮಾಡಿಸಿದರು.
ಈದೇ ಸಂದರ್ಭದಲ್ಲಿ ವಸಂತ ಬಿ ಹೊರಟ್ಟಿ ಹಾಗೂ ಅವರ ಧರ್ಮಪತ್ನಿಯವರಾದ ಡಾ. ಮಧುಲಿಕಾ ವಸಂತ ಹೊರಟ್ಟಿ ಇವರು ನೇತ್ರದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಮಂಜುನಾಥ ಮುತ್ತಲಗೇರಿ ಹಾಗೂ ಶ್ರೀಮತಿ ಬಿವಿಲಾಹ ಮುಖುಂದನ್ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.