51 ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ಲೋಕಾರ್ಪಣೆ ಇಂದು

ಕಾಳಗಿ :ಮಾ.27: ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳ್ಳಪಟ್ಟಿರುವ ಸುಕ್ಷೇತ್ರ ರೇವಗ್ಗಿ(ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ದಿ. ಶ್ರೀ ಗೋಪಾಲದೇವ ಜಾಧವ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಲಾದ 51ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿಯನ್ನು ತಾಲೂಕಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಸೋಮವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಗೋಪಾಲದೇವ ಜಾಧವ ಟ್ರಸ್ಟ್ ವತಿಯಿಂದ ಶಿವರಾಜ ಪಾಟೀಲ ಗೊಣಗಿ ತಿಳಿಸಿದ್ದಾರೆ.
ರೇಣುಕಾಚಾರ್ಯ ಮೂರ್ತಿ ಲೋಕಾರ್ಪಣೆ ಅಂಗವಾಗಿ ಸೋಮವಾರ ಬೆಳಗ್ಗೆ 7ಗಂಟೆಗೆ ರೇವಣಸಿದ್ದೇಶ್ವರ ಬೆಳ್ಳಿ ಮೂರ್ತಿಯನ್ನು ಮೆರವಣಿಗೆ ಮೂಲಕ ಭಾರಾಂಬಾಯಿಗೆ ತೆರಳಿ ಗಂಗಾ ಸ್ನಾನ ಜರಗುವುದು. ನಂತರ ವಿವಿಧ ಮಠಾಧಿಶರ ಸಮ್ಮುಖದಲ್ಲಿ ಹೋಮ ಹವನ ವಿಶೇಷ ಪೂಜೆಗಳು ಜರಗುವವು. 10:30 ಗಂಟೆಗೆ ಮಠಾಧಿಶರು ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ, ಸಂಸದ ಡಾ. ಉಮೇಶ ಜಾಧವ, ಶಾಸಕ ಬಸವರಾಜ ಪಾಟೀಲ ಯತ್ನಾಳ, ಶಾಸಕ ಡಾ. ಅವಿನಾಶ್ ಜಾಧವ ನೇತೃತ್ವದಲ್ಲಿ 51ಅಡಿ ಎತ್ತರದ ರೇಣುಕಾಚಾರ್ಯ ಮೂರ್ತಿ ಲೋಕಾರ್ಪಣೆಗೊಳ್ಳಲಿದೆ. ತದನಂತರ ಸುಧಾಮ ಕಲ್ಯಾಣ ಮಂಟಪದಲ್ಲಿ ಧರ್ಮಸಭೆ ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.