ಹು-ಧಾ. ಮ. ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಮಹಾದೇವಪ್ಪ ನರಗುಂದ ಅವರನ್ನು ಬೆಂಗೇರಿ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ, ರಾಜು ಕಾಳೆ, ಮಹಾನಗರ ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಕಲಂದರ ಮುಲ್ಲಾ (ಹಟೇಲಸಾಬ), ಅಶೋಕ್ ವಾಲ್ಮೀಕಿ ಉಪಸ್ಥಿತರಿದ್ದರು.