5000 ಲೀಟರ್ಸ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ಲೋಕಾರ್ಪಣೆ

ಬೀದರ:ಜೂ.1: ನಗರದ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬ್ರಿಮ್ಸ ಆವರಣದಲ್ಲಿ 5000 ಲೀಟರ್ಸ್‍ನಷ್ಟು ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹ ಮಾಡುವ ಸಾಮಥ್ರ್ಯದ ಟ್ಯಾಂಕ್‍ನ್ನು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಮೇ 31ರಂದು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಎರಡನೇ ಅಲೆಯ ಸಂದರ್ಭದಲ್ಲಿ ಇದು ಬಹಳಷ್ಟು ಸಹಕಾರಿಯಾಗಲಿದೆ. ಬೀದರ ಜಿಲ್ಲೆಗೆ ಈಗ ಈ ಮೂಲಕ ಸುಮಾರು ಮೂರೂವರೆ ಟನ್ ಲಿಕ್ವಿಡ್ ಆಕ್ಸಿಜನ್ ಲಭ್ಯವಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ರೀಫಿಲ್ಲಿಂಗ್ ಯುನಿಟಗಳು ಇರಲಿಲ್ಲ. 14 ಕೆಎಲ್ ಆಕ್ಸಿಜನ್ ಟ್ಯಾಂಕ್ ಮಾತ್ರ ಇತ್ತು. ಈಗ ಅದು 19 ಕೆ.ಎಲ್.ಕ್ಯಾಪಾಸಿಟಿಯಾಗಿ ಹೆಚ್ಚಳ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾತನಾಡಿ, ಬ್ರಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ 14 ಕೆಎಲ್ ಆಕ್ಸಿಜನ್ ಟ್ಯಾಂಕ್ ಇತ್ತು. ಜೊತೆಗೆ ಸಾಯಿ ಫಾರ್ಮಾ ಇಂಡಸ್ಟ್ರಿಸ್ ಅವರು ಕೂಡ 5 ಕೆಎಲ್ ಟ್ಯಾಂಕನ್ನು ನೀಡಿದ್ದರಿಂದಾಗಿ ಬ್ರಿಮ್ಸನಲ್ಲಿ 19 ಕೆ.ಎಎಲ್ ಸಾಮರ್ತ್ಯ ದಷ್ಟು ಆಕ್ಸಿಜನ್ ಲಭ್ಯತೆಗೆ ಅವಕಾಶ ಸಿಕ್ಕಂತಾಗಿದೆ. ಈಗ ಜಿಲ್ಲಾ ಎಸ್‍ಡಿಆರ್‍ಎಫ್ ಹಣದಿಂದ 2000 ಸಾಮರ್ಥ್ಯದ ವಾಪ್ರೇಜರಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಇದಕ್ಕಾಗಿ ನಾವು ಸುಮಾರು ಒಂದು ತಿಂಗಳ ಸಮಯ ಸಂಪೂರ್ಣ ಹಗಲಿರುಳು ಸತತ ಪ್ರಯತ್ನಿಸಿದ್ದೇವೆ. ಬೆಹ್ರೇನ್‍ದಿಂದ ಬಂದಿರುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು 5 ಕೆ.ಎಲ್. ಟ್ಯಾಂಕಿಗೆ ತುಂಬಿಸಿದ್ದೇವೆ.
ಇಂತಹ ಸತತ ಪ್ರಯತ್ನದಿಂದಾಗಿ ಈಗ ಬೀದರನಲ್ಲಿ 14 ಕೆಎಲ್ ಕೆಪಾಸಿಟಿಯು ಈಗ 19 ಕೆಎಲ್ ಕೆಪಾಸಿಟಿ ಆಗಿ ಪರಿವರ್ತನೆಯಾಗಿದೆ ಎಂದರು.
ಈ ಮಹತ್ವದ ಕಾರ್ಯವಾಗಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇನ್ನೀತರ ಎಲ್ಲರೂ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಮಹತ್ವದ ಕೆಲಸಕ್ಕೆ ಬಹಳಷ್ಟು ಜನರು ಸಮಯ ಮತ್ತು ಶ್ರಮವನ್ನು ನೀಡಿದ್ದಾರೆ. 5 ಕೆ,ಎಲ್. ಕೆಪಾಸಿಟಿ ಹೆಚ್ಚಳ ಮಾಡಲಿಕ್ಕೆ ವಾಸು, ಲೋಕೇಶ, ರವಿಕೀರಣ, ಶ್ರೀನಿವಾಸ, ಕೈಗಾರಿಕಾ ಇಲಾಖೆಯ ದೇವೇಂದ್ರಪ್ಪ ಅವರು ಸಂಪೂರ್ಣ ಸಮಯ ನೀಡಿದ್ದಾರೆ.
ಈ ಮಹತ್ವದ ಕಾರ್ಯಕ್ಕೆ ನಮ್ಮ ಅಧಿಕಾರಿಗಳು ಕೂಡ ಶ್ರಮಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ಅವರು, ಅಪರ ಜಿಲ್ಲಾಧಿಕಾರ ರುದ್ರೇಶ ಗಾಳಿ ಅವರು, ಬ್ರಿಮ್ಸ ಡೈರೆಕ್ಟರ್ ಶಿವಕುಮಾರ ಮತ್ತು ಬ್ರಿಮ್ಸ್ ಬಯೋಮೆಡಿಕಲ್ ಇಂಜಿನಿಯರ್ ರವಿ ಹೆಬ್ಬಾಳೆ, ಜಿಲ್ಲಾಧಿಕಾರಿಗಳ ಕಚೇರಿಯ ಸತೀಶ್ ವಾಲೆ ಹಾಗೂ ಇನ್ನೀತರರ ಶ್ರಮ ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೀದರ ಶಾಸಕರಾದ ರಹೀಂ ಖಾನ್, ಬ್ರಿಮ್ಸ್ ಡೈರೇಕ್ಟರ್ ಡಾ.ಶಿವಕುಮಾರ ಹಾಗೂ ಇನ್ನೀತರರು ಇದ್ದರು.