500 ಕೋಟಿ ಸಾಲ ಮಂಜೂರಿಗೆ ಮಾಮನಿ ಭರವಸೆ

ಮುನವಳ್ಳಿ,ಜ12: ಮುಂಬರುವ ದಿನಗಳಲ್ಲಿ ಸವದತ್ತಿ ತಾಲೂಕಿನ 103 ಪಿ.ಕೆ.ಪಿ.ಎಸ್ ಸಂಘಗಳಿಗೆ 500 ಕೋಟಿ ಸಾಲ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಭರವಸೆ ನೀಡಿದರು.
ಬೆಳಗಾವಿ ಡಿ.ಸಿ.ಸಿ ಬ್ಯಾಂಕಿಗೆ ದ್ವೀತಿಯ ಬಾರಿ ನಿರ್ದೇಶಕರಾಗಿ ಅವಿರೋಧ ಆಯ್ಕೆಗೊಂಡ ರಾಜ್ಯ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಯವರು ತಮ್ಮ ಆಯ್ಕೆಗೆ ಶ್ರಮಿಸಿದ ಸವದತ್ತಿ ತಾಲೂಕಿನ 103 ಪಿ.ಕೆ.ಪಿ.ಎಸ್ ಸಂಘಗಳ ಆಡಳಿತ ಮಂಡಳಿ ಸದಸ್ಯರಿಗೆ ಕೃತಜ್ಞತಾಪೂರ್ವ ಅಭಿನಂದನಾ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಬಿಡಿಸಿಸಿ ಬ್ಯಾಂಕಿಗೆ ನಿರ್ದೇಶಕನಾಗುವ ಮುಂಚೆ ಸವದತ್ತಿ ತಾಲೂಕಿನಲ್ಲಿ ಪಿ.ಕೆ.ಪಿ.ಎಸ್ ಸಂಘಗಳ ಪರಿಸ್ಥಿತಿ ದಯನೀಯವಾಗಿತ್ತು. ಅದನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಿ ರೈತರನ್ನು ಆರ್ಥಿಕವಾಗಿ ಸದೃಢ ಮಾಡುವ ನಿಟ್ಟಿನಲ್ಲಿ 2015 ರಲ್ಲಿ ಬ್ಯಾಂಕಿನ ಚುನಾವಣೆಗೆ ಸ್ಫರ್ಧಿಸಿ ಗೆದ್ದು ಬಂದು ತಾಲೂಕಿನಲ್ಲಿ ಇದ್ದ 78 ಸಂಘಗಳನ್ನು ಪಕ್ಷಭೇದ ಮರೆತು ಅಭಿವೃದ್ದಿಗೊಳಿಸಿದ್ದಲ್ಲದೇ ಇಲ್ಲಿಯವರೆಗೆ 25 ನೂತನ ಪಿ.ಕೆ.ಪಿ.ಎಸ್ ಸ್ಥಾಪಿಸಿ ಒಟ್ಟು 103 ಸಂಘಗಳಿಗೆ ಹಿಂದಿಗಿಂತಲೂ ಹೆಚ್ಚಿನ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ದೊರಕಿಸಿ ರೈತರ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗಿದೆ ಎಂದರು. ಸಹಕಾರಿ ಸಂಘಗಳಿಗೆ ಸರ್ಕಾರದಿಂದ ಬರುವ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಹಾಗೂ ಸಂಭಂಧಪಟ್ಟ ಇಲಾಖಾ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದರು ತಮ್ಮನ್ನು ಅವಿರೋಧವಾಗಿ ಆಯ್ಕೆಮಾಡಲು ಶ್ರಮಿಸಿದ ಎಲ್ಲ ಸಹಕಾರಿ ಸಂಘಗಳಿಗೆ ಹಾಗೂ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಾನಿದ್ಯ ವಹಿಸಿ ಮಾತನಾಡಿದ ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮಿಗಳು ಬಿಡಿಸಿಸಿ ಬ್ಯಾಂಕ್ ನಿರ್ದೆಶಕರಾದ ಮೇಲೆ ಆನಂದ ಮಾಮನಿ ಯವರು ಸವದತ್ತಿ ತಾಲೂಕಿನ ಸಹಕಾರಿ ಸಂಘಗಳ ಅಭಿವೃದ್ದಿಗೆ ಬಹಳಷ್ಟು ಶ್ರಮ ವಹಿಸಿ ರೈತರಿಗೆ ಅನುಕೊಲ ಮಾಡಿಕೊಟ್ಟಿದ್ದಾರೆ ಎಂದು ಆಶೀರ್ವದಿಸಿದರು.
ಅಧ್ಯಕ್ಷತೆಯನ್ನು ಹಿರಿಯ ಮುಖಂಡ ರಮೇಶ ಗೋಮಾಡಿ ವಹಿಸಿದ್ದರು ವೇದಿಕೆ ಮೇಲೆ ಚಂದ್ರಯ್ಯಸ್ವಾಮಿ ವಿರಕ್ತಮಠ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ ಶಿಂತ್ರಿ ಎ.ಪಿ.ಎಂ.ಸಿ ಅಧ್ಯಕ್ಷ ಪ್ರಕಾಶ ನರಿ, ಬಸಯ್ಯ ಹಿರೇಮಠ, ಮುಖಂಡ ಈರಣ್ಣ ಚಂದರಗಿ, ಪುರಸಭೆ ಅಧ್ಯಕ್ಷ ವಿಜಯ ಅಮಠೆ, ಬಿಡಿಸಿಸಿ ಬ್ಯಾಂಕಿನ ನಿವೃತ್ತ ಡೆಪ್ಯೂಟಿ ಮ್ಯಾನೇಜರ್ ಎಂ.ಎಪ್.ಮದ್ದಾನಿ, ಗೀತಾ ದೇಸಾಯಿ, ಬಿ.ಪಿ.ಪಾಟೀಲ, ಜಗದೀಶ ಕೌಜಗೇರಿ, ಪುಂಡಲೀಕ ಮೇಟಿ, ಸೋಮಶೇಖರ ಯಲಿಗಾರ ಇತರರು ಉಪಸ್ಥಿತರಿದ್ದರು.