50 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರ ಆರಂಭ


ಧಾರವಾಡ ಜೂ.01– ಅಂಜುಮನ ಸಂಸ್ಥೆಯ ಆವರಣ ಧಾರವಾಡದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಅಂಜುಮನ ಇ ಇಸ್ಲಾಂ ಧಾರವಾಡ ಹಾಗೂ ಲೈನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ಸಂಯುಕ್ತ ಆಶ್ರಯದಲ್ಲಿ 50 ಹಾಸಿಗೆಯ ಕೋವಿಡ್ ಆರೈಕೆ ಕೇಂದ್ರ ಉದ್ಘಾಟನೆಯನ್ನು ಸಸಿಗೆ ನೀರು ಉಣಿಸುವ ಮುಖಾಂತರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಶಾಸಕ ಅರವಿಂದ ಬೆಲ್ಲದ ಅಮೃತ ದೇಸಾಯಿ ಜಿಲ್ಲಾಧಿಕಾರಿ ನಿತೀಶ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಯಶವಂತ ಮದೀನಕರ, ಮಾಜಿ ಅಂಜುಮನ್ ಇ ಇಸ್ಲಾಂ ಅಧ್ಯಕ್ಷ ಮಹಮ್ಮದ ಇಸ್ಮಾಯಿಲ್ ತಮಟಗಾರ, ಎಮ್.ಜೆ.ಎಫ್. ಲಾಯನ್ ಹರ್ಷ ದೇಸಾಯಿ ಮಾಜಿ ಗೌರನರ, ಲೈನ್ಸ ಕ್ಲಬ್ ಡಿಸ್ಟ್ರಿಕ್ಟ್ 317ಬಿ, ಅಂಜುಮನ ಸಂಸ್ಥೆಯ ಉಪಾಧ್ಯಕ್ಷರಾದ ಅಶ್ಪಾಕ ಅಹಮದ ಎಸ್. ಬೆಟಗೇರಿ, ಲೈನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ಅಧ್ಯಕ್ಷರಾದ ಲಾಯನ ಡಾ. ಎಮ್. ಎ. ಮುಮ್ಮಿಗಟ್ಟಿ ಕಾರ್ಯದರ್ಶಿ ಲಾಯನ ರತಿ ಶ್ರೀನಿವಾಸನ, ಅಂಜುಮನ ಸಂಸ್ಥೆಯ ಜಂಟೀ ಕಾರ್ಯದರ್ಶಿ ಮಹಮ್ಮದ ಶಕೀಲ್ ಎಮ್. ತಮಟಗಾರ, ಅಂಜುಮನ ಸಂಸ್ಥೆಯ ಸಮೀರ ಬಿ. ಪಾಗೆ, ಎಜಾಜ ಅಹಮದ ಮುಲ್ಲಾ, ಬಶೀರ ಅಹಮ್ಮದ ಹಾಲಬಾವಿ ಹಾಗೂ ಇತರರು ಹಾಜರಿದ್ದರು. ಲೈನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ವತಿಯಿಂದ ಅಧ್ಯಕ್ಷರಾದ ಲಾಯನ ಡಾ. ಎಮ್. ಎ. ಮುಮ್ಮಿಗಟ್ಟಿಯವರು 2 ಆಕ್ಸಿಜನ ಕಾನಸ್ಸಂಟೆಟರವನ್ನು ಕೋವಿಡ್ ಆರೈಕೆ ಕೇಂದ್ರಕೆ ಹಸ್ತಾಂತರಿಸಿದರು. ಹಾಗೂ ಮಾಸ್ಕ, ಸನಿಟೈಜರ, ಪಿಪಿಇ ಕಿಟ್, ಓಕ್ಸಿಮೀಟರ ಹಾಗೂ ಇನ್ನಿತರ ಸಾಮಗ್ರಿಗಳನ್ನು ಸಹ ಹಸ್ತಾಂತರಿಸಿದರು.