50 ಹಾಸಿಗೆಗಳ ಕೊರೊನಾ ಸೋಂಕಿತರರ ಆರೈಕೆ ಕೇಂದ್ರಕ್ಕೆ ಚಾಲನೆ

ಎಮ್ಮಿಗನೂರು, ಮೇ.20- ಕೊರೊನಾವನ್ನ ಶಸ್ತ್ರಗಳಿಂದ ದೂರ ಮಾಡಲು ಸಾಧ್ಯವಿಲ್ಲ. ಅಗತ್ಯ ಎಲ್ಲ ಮುನ್ನೇಚ್ಛರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೋಂಕನ್ನು ನಿಯಂತ್ರಿಸಬಹುದು ಎಂದು ಎಮ್ಮಿಗನೂರು ಹಂಪಿಸಾವಿರ ದೇವರ ಮಠದ ವಾಮದೇವ ಮಹಾಂತೇಶ ದೇಶೀಕೇಂದ್ರ ಶಿವಾಚಾರ್ಯ ಹೇಳಿದರು.
ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ, ಸ್ಥಳೀಯ ಆಡಳಿತ, ಕಂದಾಯ, ಆರೋಗ್ಯ ಇಲಾಖೆ ಹಾಗೂ ಗ್ರಾಮಸ್ಥರ ಸಹಾಯ, ಸಹಕಾರದಿಂದ, 50ಹಾಸಿಗೆಗಳ ಕೊರೊನಾ ಸೋಂಕಿತರ ಪ್ರಾಥಮಿಕ ಆರೈಕೆ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಸೋಂಕಿತರಿಗೆ ದೈರ್ಯ ತುಂಬಿಸುವ ಕೆಲಸ ವಾಗಬೇಕು. ಸೋಂಕಿತರು ವೈದ್ಯ ಸಲಹೆ, ಸೂಚನೆಗಳನ್ನು ಪಾಲಿಸಬೇಕು. ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈಗಳನ್ನು ಆಗಾಗ ಸಾನಿಟೈಜರ್ ಮಾಡಿಕೊಳ್ಳಬೇಕು. ಸರಕಾರದ ನಿಯಮಗಳನ್ನು ಎಲ್ಲರೂ ಚಾಚು ತಪ್ಪದೆ ಪಾಲಿಸಬೇಕು ಎಂದರು. ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಸೋಂಕನ್ನು ನಿಯಂತ್ರಿಸಲು ಪ್ರಾಥಮಿಕ ಆರೈಕೆ ಕೇಂದ್ರ ತೆರೆಯಲಾಗಿದೆ. ಶೀಘ್ರದಲ್ಲಿಯೇ ಕಂಪ್ಲಿ, ಎರ್ರಂಗಳ್ಳಿ, ಮುಷ್ಟಗಟ್ಟಿಗಳಲ್ಲಿಯೂ ಕೊರೊನಾ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗುವುದು. ಸೋಂಕನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂ ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀಕರ್ ಗೌಡ ಮಾತನಾಡಿ, ಈ ಕೇಂದ್ರದಲ್ಲಿನ ಸೋಂಕಿತರಿಗೆ ಊಟದ ವ್ಯವಸ್ಥೆ ಗ್ರಾಮ ಪಂಚಾಯಿತಿಯಿ ಂದ, ಔಷಧವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪೂರೈಸಲಾಗುವುದು. ಅಲ್ಲದೆ ದಿನಾಲು ಪಾಳಿ ಪ್ರಕಾರ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಭೇಟಿ ನೀಡಿ, ಅಲ್ಲಿನ ಜನರ ಆರೋಗ್ಯ ತಪಾಸಣೆ ಮಾಡಲಾಗುವುದು ಎ ಂದರು. ತಹಸೀಲ್ದಾರ್ ಗೌಸಿಯಾಬೇಗಂ, ಗ್ರಾ.ಪಂ.ಅಧ್ಯಕ್ಷೆ ಚನ್ನದಾಸರ ಅಂಜಿನಮ್ಮ, ಉಪಾಧ್ಯಕ್ಷೆ ಗುಂಡ್ರಾಣಿ ಮಾರೆಮ್ಮ ಹಾಗೂ ಎಲ್ಲ ಸದಸ್ಯರು, ಪಿಡಿಒ ತಾರು ಲಕ್ಷ್ಮಣ ನಾಯ್ಕ, ತಾ.ಪಂ.ಇಒ ಬಿ.ಬಾಲಕೃಷ್ಣ, ಉಪ ತಹಸೀಲ್ದಾರ ಬಿ.ರವೀಂದ್ರಕುಮಾರ್, ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಇತರರು ಪಾಲ್ಗೊಂಡಿದ್ದರು.