50 ಸಾವಿರ ಪರಿಹಾರ ವಿತರಣೆ

ಕೋಲಾರ,ಸೆ,೭- ನಗರದ ಓಂಶಕ್ತಿ ಫೌಂಡೇಷನ್ ಸದಸ್ಯರಾದ ಚಿನ್ನಾಪುರದ ರುಕ್ಮೀಣಿಯಮ್ಮ ಅವರ ಮನೆಯು ಮಳೆಯಿಂದಾಗಿ ಗೋಡೆ ಕುಸಿದು ಬಿದ್ದ ಮಾಹಿತಿಯನ್ನು ತಿಳಿದ ಮಾಜಿ ಕೆ.ಯು.ಡಿ.ಎ. ಅಧ್ಯಕ್ಷ ಓಂಶಕ್ತಿ ಚಲಪತಿ ಅವರು ಸ್ಥಳಕ್ಕೆ ತೆರಳಿ ಸಂಬಂಧ ಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಕೊಂಡು ೫೦ ಸಾವಿರ ರೂ ಪರಿಹಾರ ಧನವನ್ನು ಸರ್ಕಾರದ ಅನುದಾನದಲ್ಲಿ ಬಿಡುಗಡೆ ಮಾಡ ಬೇಕೆಂದು ಸೂಚಿಸಿದರು.
ಈ ಸಂಬಂಧವಾಗಿ ತಹಸೀಲ್ದಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಪರಿಹಾರ ಧನವನ್ನು ಶೀಘ್ರವಾಗಿ ಬಿಡುಗಡೆಗೆ ಕ್ರಮ ಜರುಗಿಸ ಬೇಕೆಂದು ಪಿ.ಡಿ.ಓ. ರುಕ್ಮೀಣಿಯಮ್ಮ ಅವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾಮಾಲಮಂಜು, ಸಾಮಾಬಾಬು, ಮಂಜುನಾಥ್ ಸಿಂಗ್ ಹಾಗೂ ಪಂಚಾಯಿತಿ ಸದಸ್ಯರು ಹಾಜರಿದ್ದರು.