50 ವಿದ್ಯಾರ್ಥಿಗಳಿಗೆ ಉಚಿತ ನೋಟ ಪುಸ್ತಕ ವಿತರಣೆ

ಬೀದರ್:ಮಾ.23: ಚಿತ್ರನಟ ಪುನೀತ್ ರಾಜಕುಮಾರ ಜನ್ಮದಿನದ ಪ್ರಯುಕ್ತ ಸಪ್ತಸ್ವರ ಕಲಾ ಸಂಸ್ಥೆ ವತಿಯಿಂದ ಇಲ್ಲಿಯ ಲಿಂಗಾನಂದ ಬಡಾವಣೆಯಲ್ಲಿ 50 ಬಡ ವಿದ್ಯಾರ್ಥಿಗಳಿಗೆ ನೋಟಪುಸ್ತಕ ಉಚಿತ ವಿತರಿಸಲಾಯಿತು.
ಪುನೀತ್ ರಾಜಕುಮಾರ ಅವರು ನಿರ್ಗತಿಕರು ಹಾಗೂ ಬಡವರಿಗೆ ಆಸರೆಯಾಗಿದ್ದರು. ರಾಜ್ಯ ಸರ್ಕಾರ ಪುನೀತ್ ರಾಜಕುಮಾರ ಹೃದಯ ಜ್ಯೋತಿ ಯೋಜನೆ ಜಾರಿಗೆ ತಂದಿರುವುದು ಸಂತಸದ ಸಂಗತಿ ಎಂದು ಕರ್ನಾಟಕ ಜಾನಪದ ಕಲಾ ಪ್ರಶಸ್ತಿ ಪುರಸ್ಕøತ ಪುಂಡಲೀಕರಾವ್ ಪಾಟೀಲ ಗುಮ್ಮಾ ಹೇಳಿದರು.
ಸಪ್ತಸ್ವರ ಕಲಾ ಸಂಸ್ಥೆ ಜಿಲ್ಲೆಯ ಮಕ್ಕಳಿಗೆ ಸಂಗೀತ ವಿದ್ಯೆ ಧಾರೆ ಎರೆಯುತ್ತಿದೆ. ಸಾಮಾಜಿಕ ಚಟುವಟಿಕೆಗಳಲ್ಲೂ ಸಕ್ರಿಯವಾಗಿದೆ. ಪುನೀತ್ ರಾಜಕುಮಾರ ಜನ್ಮದಿನವನ್ನು ವಿದ್ಯಾರ್ಥಿಗಳಿಗೆ ನೋಟಪುಸ್ತಕ ವಿತರಿಸುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ನಾಗಮಾರಪಳ್ಳಿ ತಿಳಿಸಿದರು.
ನಾಟ್ಯಶ್ರೀ ನೃತ್ಯಾಲಯದ ಕಲಾವಿದೆ ಅನ್ನಪೂರ್ಣ ಪೃಥ್ವಿರಾಜ ಬೇಲೂರೆ ಭರತನಾಟ್ಯ ಪ್ರದರ್ಶನ ನೀಡಿದರು.
ಕಲಾವಿದರಾದ ಸಂಜುಕುಮಾರ ಸ್ವಾಮಿ ಉಜನಿ, ಸಾಹಿತಿ ನರಸಿಂಗರಾವ್, ಲಲಿತಾ, ಶಾಂತಕುಮಾರ ಬಿರಾದಾರ, ಕಿರಣ ನಾವದಗೆರೆ, ಪ್ರಕಾಶ ಪಾಟೀಲ, ಮಹೇಶ ಬಟ್ನಾಪುರೆ ಇದ್ದರು.