50 ವಷ ಮೇಲ್ಪಟ್ಟವರಿಗೆ ಸಿಎಲ್‌ಟಿ ಪರೀಕ್ಷೆ ವಿನಾಯಿತಿಗೆ ಒತ್ತಾಯ

ಕೋಲಾರ,ಆ.೩- ಐವತ್ತು ವಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಸಿಎಲ್‌ಟಿ ಪರೀಕ್ಷೆಯಿಂದ ವಿನಾಯಿತಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸಕ ಕೊತ್ತೂರು ಮಂಜುನಾಥ್ ರವರ ಮೂಲಕ ಪ್ರೊ. ರೈತ ನಾಯಕ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿದರು.
ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಸಿಎಲ್‌ಟಿ ಪರೀಕ್ಷೆ ಕಡ್ಡಾಯ ಮಾಡಿ ಕಂಪ್ಯೂಟರ್ ಶಿಕ್ಷಣ ಜಾರಿಗೆ ಮಾಡಿರುವುದರಿಂದ ಸುಮಾರು ಜನ ಸರ್ಕಾರಿ ನೌಕರರಿಗೆ ತೊಂದರೆಯಾಗಿದೆ ೫೦ ವಷ ಮೇಲ್ಪಟ್ಟ ಸರ್ಕಾರಿ ನೌಕರರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದು ಸಕ್ಕರೆ ಕಾಯಿಲೆ, ಬಿಪಿ, ಕಣ್ಣಿನ ದೃಷ್ಟಿ ದೋಷ ಇನ್ನು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಮುಖ್ಯಮಂತ್ರಿಗಳು ಕಡ್ಡಾಯ ಕಂಪ್ಯೂಟರ್ ಶಿಕ್ಷಣದಿಂದ ೫೦ ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಮುಂಬಡ್ತಿಗೂ ಸಮಸ್ಯೆಯಾಗಿದೆ ಎಂದರು.
ಸರಕಾರಿ ನೌಕರರು ಸುಮಾರು ೨೫-೩೦ ವಷ ಸರ್ಕಾರಿ ಸೇವೆ ಸಲ್ಲಿಸಿದರೂ ಕೂಡ ಮುಂಬಡ್ತಿ ಸಿಗದೆ ವಂಚನೆಗೆ ೫೦ ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರು ಒಳಗಾಗುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ೫೦ ವರ್ಷ ಮೇಲ್ಪಟ್ಟ ಸರಕಾರಿ ನೌಕರರಿಗೆ ಸಿಎಲ್‌ಟಿ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಿದ್ದರು. ನಂತರ ಬಂದ ಬಿಜೆಪಿ ಸರಕಾರದಲ್ಲಿ ೫೦ ವರ್ಷ ಮೇಲ್ಪಟ್ಟ ಎಲ್ಲಾ ಸರ್ಕಾರಿ ನೌಕರಿಗೂ ಸಿಎಲ್‌ಟಿ ಪರೀಕ್ಷೆ ಕಡ್ಡಾಯವೆಂದು ಆದೇಶ ಮಾಡಿದ್ದರು
ಸುಮಾರು ಸಾವಿರಾರು ಸರಕಾರಿ ನೌಕರರು ಮುಂಬಡ್ತಿಯಿಂದ ವಂಚನೆಗೊಳಗಾಗಿ ನೋವು ಪಡುತ್ತಿದ್ದಾರೆ ಮುಖ್ಯಮಂತ್ರಿಗಳು ಮತ್ತೊಮ್ಮೆ ಪರಿಶೀಲಿಸಿ ೫೦ ವಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಕಡ್ಡಾಯ ಕಂಪ್ಯೂಟರ್ ಶಿಕ್ಷಣದಿಂದ ವಿನಾಯಿತಿಯನ್ನು ನೀಡಬೇಕೆಂದು ಇದರಿಂದ ಸರ್ಕಾರಕ್ಕೆ ಮತ್ತಷ್ಟು ಒಳ್ಳೆಯ ಹೆಸರು ಬರಲಿದೆ. ಬಿಜೆಪಿ ಸರ್ಕಾರ ಮಾಡಿದ್ದ ಸಿಎಲ್‌ಟಿ ಪರೀಕ್ಷೆಯ ಆದೇಶವನ್ನು ರದ್ದು ಮಾಡಿ ಕಾಂಗ್ರೆಸ್ ಸರ್ಕಾರ ಹಿಂದೆ ಮಾಡಿದ್ದ ಆದೇಶವನ್ನು ಜಾರಿ ಮಾಡಬೇಕೆಂದು. ರೈತ ಸಂಘವು ಶಾಸಕ ಡಾ. ಕೊತ್ತೂರು ಜಿ ಮಂಜುನಾಥ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಿದರು.