50 ವರ್ಷ ಸಂಭ್ರಮದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಬೀದರ:ಎ.1:ಬೀದರ ತಾಲೂಕಿನ ಚಿಟ್ಟಾವಾಡಿಯಲ್ಲಿ ನೀಲಾಂಬಿಕ ಮಹಿಳಾ ಸಾಂಸ್ಕøತಿಕ ಅಭಿವೃದ್ಧಿ ಸಂಘ ವತಿಯಿಂದ ಕರ್ನಾಟಕ ನಾಮಕರಣಗೊಂಡ 50 ವರ್ಷ ಸಂಭ್ರಮದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ವಚನಕಾರ್ತಿಯರ ಕುರಿತು ಚಿಂತನ ಹಾಗೂ ಸಂಸ್ಕೃತಿಕ ಕಾರ್ಯಕ್ರಮವನ್ನು ಚಿಟ್ಟವಾಡಿಯಲ್ಲಿ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಮಾನವ ಸಮಿತಿಯ ಗೋವಿಂದ ಮಹಾರಾಜರು ವಹಿಸಿದರು.ಕಾರ್ಯಕ್ರಮದ ಉದ್ಘಾಟನೆ ಗಡಿ ಅಭಿವೃದ್ಧಿ ಪ್ರದಿಕಾರ ಬೆಂಗಳೂರು ಸದಸ್ಯರು ಡಾ. ಸಂಜು ಕುಮಾರ್ ಅತ್ವಾಳೆ ನಾರಿಯನ್ನು ನಾವು ದೇವತೆ ಎಂದು ಪೂಜಿಸುತ್ತೇವೆ. ನಾರಿಗೆ ಎಲ್ಲಿ ಸ್ಥಾನಮಾನ ಇಲ್ಲವೋ ಅಲ್ಲಿ ಅವನತಿಕಾಣುತ್ತದೆ ಎಂದು ಅಭಿಪ್ರಾಯಪಟ್ಟರು. ಅದೇ ರೀತಿಯಾಗಿ ಸಂಘದ ಅಧ್ಯಕ್ಷರಾದ ಶ್ರೀಮತಿ, ಸಿದ್ದಮ್ಮ ಬಸವಣ್ಣನವರ್ ಧೈಯರ್ಂ ಸರ್ವತ್ರ ಸಾಧನಂ ಎನ್ನುವಂತೆ ಪ್ರತಿ ಹೆಣ್ಣು ಧೈರ್ಯದಿಂದ ಇದ್ದು ಕಷ್ಟಗಳನ್ನು ಎದುರಿಸಬೇಕು ಎಂದು ಪ್ರಾಸ್ತಾವಿಕವಾಗಿ ಮಾತನಾಡಿದರು ಇದೇ ಸಂದರ್ಭದಲ್ಲಿ ಡಾಕ್ಟರ್ ಸಂಜಕುಮಾರ ಅತಿವಳೇ ಮಂಗಳ ಮರ್ಕಲೆ ರಾಜಕುಮಾರ್ ಬಸವಣ್ಣನವರ್ ಶ್ರೀಮತಿ ಅಂಜನಮ್ಮ ಹಾಗೂ ಸುಮತಿ ಶಕುಂತಲಾ ದೇಶಮುಖ ಇವರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು ಕಾರ್ಯಕ್ರಮಕ್ಕೆ ಶ್ರೀ ಸಂಗ್ರಾಮ್ ಸ್ವಾಗತಿಸಿದರು.ಕುಮಾರಿ ನಿರೂಪಿಸಿದರು ಶ್ರೀಮತಿ ಪಾರ್ವತಿ ಶಿವಕುಮಾರ್ ವಂದಿಸಿದರು.