50 ಲಕ್ಷ ವೆಚ್ಚದಲ್ಲಿ ಕಡಗಂಚಿ ಕೆರೆ ನಿರ್ಮಾಣಕ್ಕೆ ಭೂಮಿ ಪೂಜೆ

ಆಳಂದ:ನ.9: ಬಹುದಿನಳಿಂದ ನೆನಗುದ್ದಿಗೆ ಬಿದ್ದುಕೊಂಡಿದ್ದ ತಾಲೂಕಿನ ಕಡಗಂಚಿ ಗ್ರಾಮದ ಜಿನುಗು ಕೆರೆ ನಿರ್ಮಾಣ ಕಾಮಗಾರಿಗೆ ಶಾಸಕ ಸುಭಾಷ ಗುತ್ತೇದಾರ ಅವರು ಕೊನೆಗೂ ಭೂಮಿ ಪೂಜೆ ಕೈಗೊಂಡು ಕಾಮಗಾರಿಗೆ ಚಾಲನೆ ನೀಡಿದರು.

ಸಣ್ಣ ನೀರಾವರಿ ಇಲಾಖೆಯ ಕೈತ್ತಿಕೊಂಡ 50 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಯಲ್ಲಿ ಕೆರೆಯ ಒಡ್ಡು 494 ಮೀಟರ್ ಉದ್ದ ಹಾಗೂ 8.9.ಮೀಟರ್ ಒಡ್ಡಿನ್ ಎತ್ತರವಿದ್ದು, ಒಟ್ಟು 7.30 ಹೆಕ್ಟೇರ್ ಪ್ರದೇಶದಲ್ಲಿ 0.1477 ಎಂಎಂ ನೀರು ಸಂಗ್ರಹ ಸಾಮಥ್ರ್ಯದ ಕೆÀರೆಯಾಗಿ 158 ಎಕರೆ ಪ್ರದೇಶದ ರೈತರ ಜಮೀನಿಗೆ ನೀರಾವರಿ ಕಲ್ಪಿಸುವ 15 ಮಿ.ಮೀ ಉದ್ದ ಒಳಗೊಂಡ ಕೆರೆಯ ಕಾಮಗಾರಿಗೆ ಶಾಸಕರು ಪೂಜೆ ನೆರವೇರಿಸಿದರು.

ಬಳಿಕ ಗ್ರಾಮಸ್ಥರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಅಂತರ್ಜಲ ಹೆಚ್ಚಳ ಮಾಡಲು ಕೆರೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ವಿವಿಧ ಯೋಜನೆಗಳ ಅಡಿಯಲ್ಲಿ ನೂರಾರು ಕಾಮಗಾರಿಗಳು ಪ್ರಗತಿಯಲ್ಲಿವೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅವುಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ. ಕಡಗಂಚಿ, ಸುಂಟನೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಅತೀ ಹೆಚ್ಚಿನ ಅನುದಾನ ಮಂಜೂರಿ ಮಾಡಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಶಾಂತಪ್ಪ ಜಾಧವ ಕಾಮಗಾರಿಯ ಮಾಹಿತಿ ಒದಗಿಸಿದರು.

ಜೆಸ್ಕಾಂ ನಿರ್ದೇಶಕ ವೀರಣ್ಣ ಮಂಗಾಣೆ ಅವರು ಮಾತನಾಡಿ, ಶಾಸಕರು ಅಧಿಕಾರಕ್ಕೆ ಬಂದ ಮೇಲೆ ನೀರಾವರಿ, ಶಿಕ್ಷಣ ರಸ್ತೆ, ಸಮುದಾಯ ಭವನದಂತ ಕಾಮಗಾರಿಗಳನ್ನು ಕೈಗೊಂಡ ಎಲ್ಲ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಬರುವ ಚುನಾವಣೆಯಲ್ಲಿ ಅವರ ಕೈಬಲಪಡಿಸಲು ಮತದಾರರು ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದರೆ ಹೆಚ್ಚಿನ ಅಭಿವೃದ್ಧಿಯಾಗುತ್ತದೆ ಎಂದರು.

ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಕೆಕೆಆರ್‍ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಸಹಾಯಕ ಅಭಿಯಂತರ ವೀರೇಶ, ಕಿರಿಯ ಅಭಿಯಂತರರಾದ ಅನಿಲಕುಮಾರ ಮಾಶ್ಯಾಳಕರ, ಕಡಗಂಚಿ ಕಟ್ಟಿಮಠದ ಪಂಪಾಪತಿ ದೇವರು, ಮುಖಂಡ ನಾಗೇಂದ್ರಪ್ಪ ಪಾಳಾ, ಬಸವರಾಜ ಬಿರಾದಾರ, ಪಂಡಿತ ಚೌಲ, ಸಂತೋಷ ಹಾದಿಮನಿ, ಈರಣ್ಣ ಹತ್ತರಕಿ, ಸಾಯಿಬಣ್ಣ ಪಾಟೀಲ, ಗುರು ಸ್ವಾಮಿ, ಚೇತನ ತಡಕಲ, ಶಿವಾನಂದ ಸಾಗರ, ಗುಂಡಪ್ಪ ಪೂಜಾರಿ, ಶ್ರೀಶೈಲ ಪಾಟೀಲ, ಪ್ರಭುಲಿಂಗ ಭೂಸನೂರ, ಶಿವಶಂಕರ ಮರಬೇ, ರಾಮಚಂದ್ರ ಅವರಳ್ಳಿ, ಶಂಕರರಾವ ಪಾಟೀಲ, ಬಾಬುರಾವ ಸರಡಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.