50 ಲಕ್ಷ ರೂ ಮೊತ್ತದ ಮಳೆ ನೀರು ಚರಂಡಿ ಕಾಮಗಾರಿಗೆ ಶಾಸಕ ಯತ್ನಾಳರಿಂದ ಭೂಮಿ ಪೂಜೆ

ವಿಜಯಪುರ, ಜೂ.5-ನಗರ ಶಾಸಕ ಬಸನಗೌಡ ರಾ. ಪಾಟೀಲ್ ಯತ್ನಾಳರವರು ಮಹಾನಗರ ಪಾಲಿಕೆಯ 15ನೇ ಹಣಕಾಸು ನಿಧಿಯಲ್ಲಿ ಮಂಜೂರಿಸಿದ ಒಟ್ಟು 50 ಲಕ್ಷ ರೂ ಮೊತ್ತದಲ್ಲಿ ನಗರದ ವಾರ್ಡ ನಂ.14 ರ ಶ್ಯಾಪೇಟಿಯಿಂದ ಡಾ.ಬಿ.ಆರ್.ಅಂಬೇಡ್ಕರ ಭವನ, ಯಲ್ಲಮನ ದೇವಸ್ಥಾನದ ಹತ್ತಿರದಿಂದ ಮಾಂಗಗಾರುಡಿ ಕಾಲನಿ ಮೂಲಕ ಅಪ್ಸರಾ ಟಾಕೀಸ್ ವರೆಗೆ ಮಳೆ ನೀರು ಚರಂಡಿ (ಓಪನ್ ಡ್ರೇನ್) ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ನಗರದ ಅಡಕಿಗಲ್ಲಿ ಹತ್ತಿರ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ತೆರೆಯಲಾದ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು.
ನಗರದ ಗಲ್ಲಿ ಗಲ್ಲಿ, ಮನೆ ಮನೆಗೆ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗುತ್ತಿದ್ದು, ಇದರಿಂದ ಇಂದು ನಗರದಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ಬಹಳ ಗಣನೀಯವಾಗಿ ಕಡಿಮೆಯಾಗುತ್ತ ಬಂದಿವೆ. ಲಸಿಕೆಯ ಬಗ್ಗೆ ಜನರಲ್ಲಿರುವ ಆತಂಕ ದೂರಮಾಡಲು ಸ್ವತಹ ಪ್ರಧಾನಿಗಳೆ ಲಸಿಕೆ ಪಡೆದುಕೊಂಡರು, ನಾನು ಲಸಿಕೆ ಪಡೆದುಕೊಂಡೆ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಜನರಿಗೆ ತಿಳಿಸುತ್ತ ಜಾಗೃತಿ ಮೂಡಿಸುವದರೊಂದಿಗೆ ಲಸಿಕಾ ಅಭಿಯಾನ ಮಾಡಿದ್ದು ಯಶಸ್ವಿಯಾಗಿದೆ ಎಂದರು.
ವಿಜಯಪುರ ನಗರವು ಕೊವಿಡ್-19 ಸೊಂಕಿನಿಂದ ಗಣನೀಯವಾಗಿ ಇಳಿಕೆ ಕಂಡಿದೆ, ಈ ನಿಟ್ಟಿನಲ್ಲಿ ವಿಜಯಪುರ ನಗರ ಪ್ರದೇಶವನ್ನು ಲಾಕ್‍ಡೌನ್ ಮುಕ್ತ ಮಾಡಬೇಕು, ಇದರಿಂದ ನಗರ ಪ್ರದೇಶದಲ್ಲಿ ಮಳೆಗಾಲದ ಈ ಸಂದರ್ಭದಲ್ಲಿ ರೈತರು ಬಂದು ತಮ್ಮ ಹೊಲಗಳಿಗೆ ಬಿತ್ತನೆ ಬೀಜ, ಗೊಬ್ಬರ ಖರೀಧಿಸಲು ಅನಕೂಲವಾಗುತ್ತದೆ. ಅಲ್ಲದೇ ಇನ್ನೀತರ ಜನಜೀವನ ನಡೆಸುವ ಸಣ್ಣ ಪುಟ್ಟ ವ್ಯಾಪಾರಸ್ಥರಿಗೂ ಸಹ ತಮ್ಮ ಉಪಜೀವನಕ್ಕಾಗಿರುವ ಸಣ್ಣ ವ್ಯಾವಾರವನ್ನು ನಡೆಸುವದರಿಂದ ಅವರ ಜೀವನ ನಿರ್ವಹಣೆ ಸಾಗುತ್ತದೆ. ಕರೋನ ವೈರಸ್ ಸೋಂಕಿನಲ್ಲಿ ಇಳಿಕೆ ಕಂಡಿರುವ ವಿಜಯಪುರ ನಗರ ಪ್ರದೇಶವನ್ನು ಬೆಳಿಗ್ಗೆ 10.00 ಗಂಟೆಯಿಂದ ಸಾಯಂಕಾಲ 5.00 ಗಂಟೆಯವರೆಗೆ ಲಾಕ್‍ಡೌನ್ ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಸದಸ್ಯ ವಿಕ್ರಮ್ ಗಾಯಕವಾಡ, ಪಾಲಿಕೆ ಮಾಜಿ ಸದಸ್ಯರಾದ ಅಶೋಕ ಬೆಲ್ಲದ, ರಾಜೇಶ ದೇವಗೇರಿ, ವೈಧ್ಯಾಧಿಕಾರಿಗಳಾದ ಡಾ.ಎಸ್.ಎಲ್, ಲಕ್ಕಣ್ಣವರ್, ಡಾ.ಕವಿತಾ ಡೊಡ್ಡಮನಿ, ಚಂದ್ರು ಚೌಧರಿ, ಪ್ರಕಾಶ ಚವ್ಹಾಣ, ರಾಜು ಕುರಿಯವರ, ರಾಜಶೇಖರ ಭಜಂತ್ರಿ, ಭೀಮು ಮಾಶ್ಯಾಳ, ನಾಗರಾಜ ಮುಳವಾಡ, ರಮೇಶ ಪಡಸಲಗಿ, ಅನೀಲ ಮೇಲಿನಮನಿ, ಸದಾಶಿವ ಸಗಿರನಾಳ, ಉಮೇಶ ವೀರಕರ ಉಪಸ್ಥಿತರಿದ್ದರು.