50 ನೇ ತೆಪ್ಪೋತ್ಸವ


ಮುನವಳ್ಳಿ,ಜ.13: ಪಟ್ಟಣದ ಹಳೆ ಸೇತುವೆ ಮಲಪ್ರಭಾ ನದಿಯಲ್ಲಿ ದಿ. 15 ರಂದು ಮಕರ ಸಂಕ್ರಮಣದ ನಿಮಿತ್ಯವಾಗಿ ತೆಪ್ಪೋತ್ಸವ ಜರಗುವದು.
ಮಧ್ಯಾಹ್ನ 3-30 ಕ್ಕೆ ಲಿಂ. ಶ್ರೀ ಸಿದ್ದಬಸವ ಮಹಾಸ್ವಾಮಿಗಳ ಭಾವಚಿತ್ರ ಸೋಮಶೇಖರ ಮಠದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯಮೇಳಗಳೋಂದಿಗೆ ಮೆರವಣಿಗೆ ಮೂಲಕ ಶ್ರೀ ಆಲೂರಮಠಕ್ಕೆ ತಲುಪಿ ಅಲ್ಲಿ ಸಮಾರಂಭ ಜರುಗುವುದು ದಿವ್ಯ ಸಾನಿಧ್ಯ ಡಾ|| ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು, ಮುರುಘೇಂದ್ರ ಮಹಾಸ್ವಾಮಿಗಳು, ವಹಿಸುವರು. ಈರಯ್ಯ ಪಂಚಯ್ಯ ಹಿರೇಮಠ, ಮಡಿವಾಳಯ್ಯ ಬಸಯ್ಯ ಹಿರೇಮಠ ಇವರ ಸಮ್ಮುಖದಲ್ಲಿ ಸಮಾರಂಭ ಜರುಗುವದು.
ನಂತರ ಮಲಪ್ರಭಾ ನದಿಯಲ್ಲಿ ಶ್ರೀ ಡಾ|| ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಸಾವಿರಾರು ಬಕ್ತರ ಸಮ್ಮುಖದಲ್ಲಿ ಜರಗುವದು. ಎಂದು ಎಚ್.ವಿ.ಅಸೂಟಿ ಪ್ರಕಟಣೆಯಲ್ಲಿ ತಿಳಿಸಿರುವರು.