50 ದಿನ ಫೂರೈಸಿದ ಅಗ್ರಸೇನಾ

ಇತ್ತೀಚೆಗೆ  ಡೇರ್ ಡೆವಿಲ್ ಮುಸ್ತಫಾ 50 ದಿನ ಕಂಡಿತ್ತು. ಅದರ ಬೆನ್ನಲ್ಲೇ  “ಅಗ್ರಸೇನಾ” ಚಿತ್ರ ಅರ್ದಶತಕ ಬಾರಿಸಿ ಮುನ್ನಡೆದಿದೆ‌. ಮಮತಾ ಜಯರಾಮರೆಡ್ಡಿ  ನಿರ್ಮಿಸಿರುವ ಚಿತ್ರದ ಐವತ್ತು ದಿನಗಳ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ನಿರ್ಮಾಪಕ ಜಯರಾಮರೆಡ್ಡಿ, ಮಮತಾ ಜಯರಾಮರೆಡ್ಡಿ, ಚಿತ್ರದ ನಾಯಕ ಅಗಸ್ತ್ಯ ಬೆಳಗೆರೆ, ಮನಮೋಹನ ರೈ, ರಂಜಿತ್, ಶಶಿಧರ ಗೌಡ,ಮೀನಾಕ್ಷಿ,  ಮುಂತಾದವರು ಮಾತನಾಡಿ ಯಶಸ್ಸಿನ ಸಂತಸವನ್ನು ಹಂಚಿಕೊಂಡರು.

ನಿರ್ಮಾಪ ಕ ಜಯರಾಮರೆಡ್ಡಿ ಮಾತನಾಡಿ  ಸಂತಸಕ್ಕೆ ಕಾರಣರಾದ ಕನ್ನಡ ಪ್ರೇಕ್ಷಕರಿಗೆ ನನ್ನ ಧನ್ಯವಾದ ತಿಳಿಸುತ್ತೇನೆ. ಪರದೆಯ ಹಿಂದೆ ಮುಂದೆ ದುಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಚಿತ್ರದ ಖಳನಟ  ಮನಮೋಹನ್ ರೈ,ಲವರ್ ಬಾಯ್ ಆಗಿ ಅಮರ್, ದಸರಾಬೊಂಬೆ ರಚನಾ ದಶರಥ್  ಅದ್ಭುತ ಅಭಿನಯ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.

ನಿರ್ಮಾಪಕಿ ಮಮತಾ ಜಯರಾಮ ರೆಡ್ಡಿ,. ಈ ವರ್ಷ ಬಿಡುಗಡೆಯಾದ  150 ಸಿನಿಮಾಗಳಲ್ಲಿ ಹೊಸಬರ ಪ್ರಯತ್ನದ  ಫಲವಾದ  ಸಿನಿಮಾ  ಐವತ್ತು ದಿನದ ಗೆಲುವನ್ನು ಕಂಡಿದೆ ಎಂದರು.

ನಟ ಅಗಸ್ತ್ಯ ಬೆಳಗೆರೆ ಮಾತನಾಡಿ,ಜೂನ್ 23 ಕ್ಕೆ ಬಿಡುಗಡೆಯಾಗಿತ್ತು. ಚಿತ್ರದ ಯಶಸ್ಸಿಗೆ  ಪ್ರತಿಯೊಬ್ಬರೂ ನೀಡಿದ ಸಹಕಾರವೇ ಕಾರಣ, ನಾಲ್ಕು ವರ್ಷ ತಪಸ್ಸು ಮಾಡಿ ಈ ಸಿನಿಮಾ ಮಾಡಿದ್ದೇನೆ ಎಂದರು.

ನಾಯಕ ಅಮರ್ ವಿರಾಜ್ , ಅನಾರೋಗ್ಯದ ಕಾರಣ  ನಿರ್ದೇಶಕ ಮುರುಗೇಶ್ ಕಣ್ಣಪ್ಪ ಕೂಡ ಬಂದಿರಲಿಲ್ಲ, ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಅರ್ದ ಶತಕ ಅಪರೂಪ

ಇತ್ತೀಚೆಗೆ 25 ದಿನ 50ದಿನ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುವುದು ತೀರಾ ಅಪರೂಪವಾಗಿದೆ.ಅಲ್ಲೊಂದು ಇಲ್ಲೊಂದು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ.ಇದೀಗ ಆ ಸಾಲಿಗೆ ಅಗ್ರಸೇನಾ ಕೂಡ ಕಾಣಿಸಿಕೊಂಡಿದೆ.ಚಿತ್ರಮಂದಿರದಲ್ಲಿ 50 ದಿನ ಪೂರ್ಣಗೊಳಿಸಿ ಮುನ್ನೆಡೆದಿದೆ