50 ಕೋಟಿ ಕಾಮಗಾರಿಗೆ ಚಾಲನೆ

ಕೆ.ಆರ್.ಪುರ, ನ.೨೦- ಬಹು ದಿನಗಳಿಂದ ಮೂಲಭೂತ ಸೌಕರ್ಯಗಿಲ್ಲದೆ ಕಲುಷಿತವಾಗಿದ್ದ ಕೆರೆಗಳಿಗೆ ಶಾಸಕ ಅರವಿಂದ ಲಿಂಬಾವಳಿ ಕೆರೆಗಳ ಅಭಿವೃದ್ಧಿಗೆ ಮುಂದಾಗಿದ್ದು ಸುಮಾರು ೫೦ ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಾಗಾರಿಗೆ ಚಾಲನೆ ನೀಡಿದರು. ಮಹದೇವಪುರ ಕ್ಷೇತ್ರದ ಕಣ್ಣೂರು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ೬೭ ಎಕರೆಯ ಕಣ್ಣೂರು ಕೆರೆಗೆ ೧೦ ಕೋಟಿ ಹಾಗೂ ೧೮೭ ಎಕರೆ ವಿಸ್ತೀರ್ಣವಿರುವ ದೊಡ್ಡಗುಬ್ಬಿ ಪಂಚಾಯತಿಯ ರಾಂಪುರ ಕೆರೆಯನ್ನು ೪೦ ಕೋಟಿ ಅನುದಾನವನ್ನು ನೀಡಿದ್ದಾರೆ. ಕೆರೆಗಳ ಅಭಿವೃದ್ಧಿಯಿಂದ ಜಲಮೂಲಗಳ ವೃದ್ದಿಯೊಂದಿಗೆ ಸುತ್ತಮುತ್ತಲಿನ ವಾತಾವರಣ ಸಹ ಉತ್ತಮವಾಗಲಿದ್ದು, ಉತ್ತಮ ಆರೋಗ್ಯ ಲಭ್ಯವಾಗಲಿದೆ. ಕಣ್ಣೂರು ಮತ್ತು ರಾಂಪುರ ಗ್ರಾಮಗಳ ಜನತೆ ಕೃಷಿಯನ್ನೆ ಅವಲಂಭಿಸಿದ್ದು, ಕೆರೆಗಳ ಅಭಿವೃದ್ಧಿಯಿಂದ ಕೃಷಿಗೆ ಹೊಸ ಆಯಾಮ ಒದಗಿಸಲಿದೆ. ಜೊತೆಗೆ ಸ್ಥಳೀಯ ಯುವಕರಿಗೆ ಕ್ರೀಡಾಂಗಣ ಸೇರಿದಂತೆ ವಾಕಿಂಗ್ ಟ್ರಾಕ್ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆ ಮಾಲಾ ಮಾರುತಿಕುಮಾರ್, ಇ.ಓ. ಮಂಜುನಾಥ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಅಶೋಕ್, ಮಾರುತಿ,ಶ್ರೀನಿವಾಸ್, ಗ್ರಾಮಾಂತರ ಅಧ್ಯಕ್ಷ ನಟರಾಜ್, ಮುಖಂಡರಾದ ನಂಜೇಗೌಡ, ಎಸ್ ಎಲ್ ಎನ್ ಮಂಜುನಾಥ್,ಕೆಂಪೇಗೌಡ, ಮೋಹನ್ ರೆಡ್ಡಿ,ಗಜೇಂದ್ರ ಇದ್ದರು.