50 ಕುಟುಂಬಗಳಿಗೆ ದಿನಸೀ ಕಿಟ್ ವಿತರಣೆ

ಮೈಸೂರು: ಜೂ.03: ಲಾಕ್ಡೌನ್ ನಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ದಿನಸೀ ಕಿಟ್ ಗಳನ್ನು ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ನಾಲ್ಕನೇ ಕಂತಿನಲ್ಲಿ 50 ಕುಟುಂಬಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳು ಸ್ವಾವಲಂಬನೆಯಿಂದ ಜೀವನ ನಡೆಸುತ್ತಿದ್ದು ತಮ್ಮಕಷ್ಟಗಳನ್ನು ಇನ್ನೊಬ್ಬರಿಗೆ ಹೇಳಿಕೊಳ್ಳದಂತಹಾ ಸ್ಥಿತಿ ನಿರ್ಮಾಣವಾಗಿದೆ, ಇದನ್ನು ಮನಗಂಡು ಹೊಯ್ಸಳ ಕರ್ನಾಟಕ ಸಂಘವು ಸಹಾಯ ಮಾಡುತ್ತಿರುವುದು ಶ್ಲಾಘನೀಯ ಮತ್ತು ಸ್ಮರಣೀಯವಾಗಿದೆ ಎಂದರು.
ಕೋವಿಡ್‍ನ ಯಾವುದೇ ಸಂಕಷ್ಟದಲ್ಲಿ ವೈಯುಕ್ತಿಕವಾಗಿ ಕರೆ ಮಾಡಿದ ಎಷ್ಟೋ ಕುಟುಂಬಗಳಿಗೆ ಸಾಂತ್ವನ ಅಹಾಯ ಹಸ್ತ ಚಾಚಿರುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ವೇ.ಬ್ರ.ಶ್ರೀ. ಡಾ.ಭಾನುಪ್ರಕಾಶ ಶರ್ಮ ಗುರುಗಳು,ಎಂ.ಆರ್.ಬಾಲಕೃಷ್ಣ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ.ಆರ್.ಸತ್ಯನಾರಾಯಣ, ಉಪಾಧ್ಯಕ್ಷ ಹೆಚ್.ಆರ್.ಸುಂದರೇಶನ್, ಕಾರ್ಯದರ್ಶಿ ಶ್ರೀನಿಧಿ, ಸಹಕಾರ್ಯದರ್ಶಿ ಎಸ್.ರಂಗನಾಥ್, ಖಜಾಂಚಿ ಜಯಸಿಂಹ, ನಿರ್ದೇಶಕರುಗಳಾದ ಶಂಕರನಾರಾಯಣ್, ಶ್ರೀಮತಿ ಅನುಪಮ ಸದಸ್ಯರಾದ ವಿಜಯ್ ಕುಮಾರ್, ಪ್ರಶಾಂತ ಭಾರದ್ವಾಜ್ ಮುಂತಾದವರು ಹಾಜರಿದ್ದರು.