50 ಕಾನ್ಸಂಟ್ರೇಟರ್ಸ್ ಗಳ ವಿತರಣೆ ::

 ಹಿರಿಯೂರು.ಮೇ.27. ಇಲ್ಲಿನ ನೆಹರು ಮಾರುಕಟ್ಟೆ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮ ಶ್ರೀನಿವಾಸ್ ರವರ   ನೇತೃತ್ವದಲ್ಲಿ, ನಗರದ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸಂಗ್ರಹಿಸಿದ್ಧ50 ಕಾನ್ಸಂಟ್ರೇಟರ್ಸ್ ಗಳನ್ನು ಆರೋಗ್ಯ ಇಲಾಖೆಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ   ಶಾಸಕಿ ಪೂರ್ಣಿಮಾ ಶ್ರೀನಿವಾ‌ಸ್ ,ಯಾದವ ಸಮಾಜದ ರಾಜ್ಯಾಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್,ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ್, ಟಿ.ಹೆಚ್.ಓ.ಡಾ.ವೆಂಕಟೇಶ್,ಡಿ.ವೈ.ಎಸ್.ಪಿ.ಸೈಯದ್ ರೋಷನ್ ಜಮೀರ್, ವೃತ್ತ ನಿರೀಕ್ಷಕರಾದ ಕೆ.ಆರ್.ರಾಘವೇಂದ್ರ, ಶಿವಕುಮಾರ್,  ವರ್ತಕರಾದ ಕೆ.ವಿ.ಅಮರೇಶ್, ಬಿ.ಜಯಕುಮಾರ್,ನಾಗಭೂಷಣ್,ನಿಜಾಮುದ್ದೀನ್   ಫಕೃದ್ದೀನ್ ಹಾಗೂ  ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.