50 ಆಕ್ಸಿಜನ್ ಕಾನ್ಸನ್ ಟ್ರೇಟರ್ ಶ್ರೀ ಧರ್ಮಸ್ಥಳ ಯೋಜನಯಿಂದ ಮಂಜೂರು

ಹುಬ್ಬಳ್ಳಿ ಮೇ 30 : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆಯವರು ರಾಜ್ಶಾದ್ಶಂತ 300 ಆಕ್ಸಿಜನ್ ಕಾನ್ಸನ್ ಟ್ರೇಟರ್, 20 ಮೆಡಿಕಲ್ ವೆಂಟಿಲೇಟರ್, 10 ಹೈ ಪೆÇ್ಲೀ ಆಕ್ಸಿಜನ್ ಯಂತ್ರ ಮಂಜೂರು ಮಾಡಿದ್ದಾರೆ ಎಂದು ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೇ ಗೌಡರವರರು ತಿಳಿಸಿದರು.
ನಂತರ ಮಾತನಾಡಿದ ಅವರು ಇದರಲ್ಲಿ ಸಂಸ್ಥೆಯ ಮುಖ್ಶಕಾರ್ಯನಿರ್ವಾಹಣಾಧಿಕಾರಿ ಡಾ. ಎಲ್ .ಹೆಚ್.ಮಂಜುನಾಥ್ ರವರ ಮಾರ್ಗದರ್ಶನದಂತೆ 50 ಆಕ್ಸಿಜನ್ ಕಾನ್ಸನ್ ಟ್ರೇಟರ್ 7 ವೆಂಟಿಲೇಟರ್, 8 ಹೈ ಪೆÇ್ಲೀ ಆಕ್ಸಿಜನ್ ಯಂತ್ರ ಧಾರವಾಡ ಪ್ರಾದೇಶಿಕ ವ್ಶಾಪ್ತಿಯಲ್ಲಿ ಉಚಿತ ನೀಡಲಾಗುತ್ತಿದ್ದು, ಈ ದಿನ 10 ಆಕ್ಸಿಜನ್ ಕಾನ್ಸನ್ ಟ್ರೇಟರ್‍ಗಳನ್ನು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿ ಮತ್ತು ಸರಕಾರಿ ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಒದಗಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಸಂಕಲ್ಪ ಶೆಟ್ಟರ್, ಹುಬ್ಬಳ್ಳಿ ಕಿಮ್ಸ್ ವೈದ್ಶಕೀಯ ಅಧೀಕ್ಷಕರಾದ ಡಾ, ಅರುಣ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆಯ ರಾಜಣ್ಣ ಕೊರವಿ, ಕಾಪೆರ್Çೀರೇಟರ್ ತಿಪ್ಪಣ್ಣ ಮಜ್ಜಗಿ, ವಿಶ್ವಮಾನ್ಶ ಪ್ರಶಸ್ತಿ ಪುರಸ್ಕ್ರತ ಸಂತೋಷ್ ಆರ್. ಶೆಟ್ಟಿ, ಶೇಖರ್ ಗೌಡ ಬೀರವಳ್ಳಿ, ಸಂಸ್ಥೆಯ ನಿರ್ದೇಶಕ ದಿನೇಶ್ ಎ. ಯೋಜನಾಧಿಕಾರಿ ಮಂಜುನಾಥ್, ನಾಗೇಶ್ ಇನ್ನಿತರರು ಉಪಸ್ಥಿತರಿದ್ದರು.