5.20 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಕಾಮಗಾರಿಗೆ ಚಾಲನೆಆಳಂದನಲ್ಲಿ ಸರ್ದಾರ ವಲ್ಲಾಭಾಯಿ ಪಟೇಲ, ಅಮರ್ಜಾದಲ್ಲಿ ಶಿವನ ಪ್ರತಿಮೆ ಸ್ಥಾಪನೆ: ಗುತ್ತೇದಾರ

ಕಲಬುರಗಿ:ಸೆ.19:ಬರುವ ದಿನಗಳಲ್ಲಿ ಅಮರ್ಜಾ ಅಣೆಕಟ್ಟೆ ಪ್ರವಾಸೋದ್ಯಮ ತಾಣವಾಗಿಸಿ ಶಿವನ ಪ್ರತಿಮೆ ಸ್ಥಾಪನೆ ಮತ್ತು ಪಟ್ಟಣದ ಹಳೆಯ ಚೆಕ್‍ಪೋಸ್ಟ್ ಸ್ಥಳದಲ್ಲಿ ಸರ್ದಾರ ವಲ್ಲಾಭಾಯಿ ಪಟೇಲರ ಪ್ರತಿಮೆ ಸ್ಥಾಪನೆ ಕೈಗೊಳ್ಳಲಾಗುವುದು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಪ್ರಕಟಿಸಿದರು.

ಪಟ್ಟಣದ ಮಟಕಿ ರಸ್ತೆಯ ಸರ್ಕಾರಿ ಆಸ್ಪತ್ರೆಯ ಬಳಿಯ ತಾಲೂಕು ಸಾರ್ವಜನಿಕ ಕ್ರೀಡಾಂಗಣಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯ 2.20 ಕೋಟಿ ಹಾಗೂ ಕ್ರೀಡಾ ಇಲಾಖೆಯ 3 ಕೋಟಿ ಸೇರಿ ಒಟ್ಟು 5.20 ಕೋಟಿ ವೆಚ್ಚದ ಅನುದಾನದಲ್ಲಿ ಸುಸರ್ಜಿತ ಸಾರ್ವಜನಿಕ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಇಂಥ ಎಲ್ಲ ಕೆಲಸಗಳಿಗೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೆಕೆಆರ್‍ಡಿಬಿಯಿಂದ ನಿರೀಕ್ಷೆ ಮೀರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ದೊರೆಯುತ್ತಿದೆ. ಈ ಅನುದಾನದಡಿ ಕೈಗೆತ್ತಿಕೊಂಡ ಶಾಲೆ, ಕಾಲೇಜುಗಳ ಕಟ್ಟಡ, ರಸ್ತೆ ನಿರ್ಮಾಣ, ಸಮುದಾಯ ಭವನ ದೇವಸ್ಥಾನ, ಉದ್ಯಾನವನ, ನೀರಾವರಿಯಂತ ಕಾಮಗಾರಿಗಳಲ್ಲಿ ಯಾವುದೇ ರಾಜೀಮಾಡಿಕೊಳ್ಳದೆ ಗುಣಮಟ್ಟತೆಗೆ ಒತ್ತು ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಕ್ರೀಡಾಂಗಣಕ್ಕೆ 2.20 ಕೋಟಿ ಅನುದಾನದಲ್ಲಿ ಜಿಪಂಗೆ ಕಾಮಗಾರಿ ವಹಿಸಿದ್ದ ಇದರಲ್ಲಿ ವಿಶ್ರಾಂತಿಕೋಣೆ, ಆಡಳಿತ ಕಚೇರಿ, ಕಂಟ್ರೋಲ್ ರೂಮ್ ಸೇರಿ ಆವರಣ ಗೋಡೆ ಕಾಮಗಾರಿ ನಡೆಯಲಿದೆ. ಸಾಲದಕ್ಕೆ ಕ್ರೀಡಾ ಇಲಾಖೆಯ 3 ಕೋಟಿ ವೆಚ್ಚದ ಕಾಮಗಾರಿಯ ಕ್ರೀಯಾ ಯೋಜನೆಗೆ ಸೂಚಿಸಿದ್ದು, ಇದರಲ್ಲಿ ಹೊರಾಂಗಣ ಜೀಮ್, ವಾಯುವಿಹಾರ, ಮಕ್ಕಳ ಪಾರ್ಕ ಮತ್ತು ಕ್ರೀಡಾ ಕುಳಿತು ನೋಡುವ ಪಾಟುಣಿಕೆಯಂತ ಸುಸರ್ಜಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.

ಈಗಾಗಲೇ ಪೊಲೀಸ್ ಮೈದಾನದಲ್ಲಿ 1.85 ಕೋಟಿ ವೆಚ್ಚದಲ್ಲಿ ಉದ್ಯಾನವನ ಮತ್ತು ಜೀಮ್, ಪಾರ್ಕ ಸಹ ನಡೆಯಲಿದೆ. ಇನ್ನೂ ಸಾಲದಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ತಾಲೂಕಿನ ಜೀವನಾಡಿ ಅಮರ್ಜಾ ಅಣೆಕಟ್ಟೆ ಪ್ರದೇಶದಲ್ಲಿ ಪ್ರವಾದ್ಯೋಮ್ಯ ಅಭಿವೃದ್ಧಿ ಪಡಿಸಲು ಈ ಇಲಾಖೆಯಿಂದ 10 ಕೋಟಿ ನೀಡಿದ್ದು ಸಾಲದಕ್ಕೆ ಕೆಕೆಆರ್‍ಡಿಬಿಯಿಂದ ಹೊಸದಾಗಿ ಮತ್ತೆ 10 ಕೋಟಿ ಸೇರಿ 20 ಕೋಟಿಯಲ್ಲಿ ಉದ್ಯಾನವನ, ಬೋಟಿಂಗ್ ಕೆಲಸ ಮತ್ತು 5 ಕೋಟಿ ರೂ.ಗಳಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆ ಜೊತಗೆ ಶಿವನ ಪ್ರತಿಮೆ ಸ್ಥಾಪಿಸಲು ಒಟ್ಟು 25 ಕೋಟಿಯಲ್ಲಿ ಅಣೆಕಟ್ಟೆಯಲ್ಲಿ ಕಾಮಗಾರಿಗೆ ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಜಿಪಂ ಸಹಾಯಕ ಇಂಜಿನಿಯರ್ ಲಿಂಗರಾಜ ಪೂಜಾರಿ, ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ, ಸಂತೋಷ ಹೂಗಾರ, ಆಸ್ಮೀತಾ ಚಿಟಗುಪ್ಪಕರ್, ಮುಖಂಡ ಸಿದ್ಧು ಪೂಜಾರಿ, ರಾಜು ಷಣ್ಮೂಖ, ಮಿರು, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮಹಾಂತಪ್ಪ ಹಾಳಮಳಿ ಮತ್ತಿತರು ಉಪಸ್ಥಿತರಿದ್ದರು.