5 ಸಾವಿರ ರೂ.ಘೋಷಣೆಗೆ ಕಾಂಗ್ರೆಸ್ ಆಗ್ರಹ

ಹುಬ್ಬಳ್ಳಿ,ಮೇ18: ಕೊರೊನಾ ಮಹಾಮಾರಿಯಿಂದಾಗಿ ಲಾಕ್‍ಡೌನ್ ಹಿನ್ನೆಲೆ ರಾಜ್ಯದಲ್ಲಿ ತೀವ್ರ ಸಂಕಷ್ಟದಲ್ಲಿರುವ ಆಟೋ ಚಾಲಕರು, ಕಟ್ಟಡ ಕಾರ್ಮಿಕರು, ಹಮಾಲರು ಸೇರಿದಂತೆ ದುಡಿಯುವ ವರ್ಗದ ಪ್ರತಿಯೊಬ್ಬ ಕಾರ್ಮಿಕ ಕುಟುಂಬಕ್ಕೆ ತಲಾ 5000 ರೂ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡರುಗಳು ಆಗ್ರಹಿಸಿದ್ದಾರೆ.
ಕೊರೊನಾ ರೋಗದಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಜನಸಾಮಾನ್ಯರಿಗೆ ಸರಿಯಾದ ನಿಟ್ಟಿನಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಗಳನ್ನು ಪೂರೈಸುವಂತೆ ವಿನಂತಿಸಿಕೊಂಡಿದ್ದಾರೆ.
ಜಿಲ್ಲಾ ಆಡಳಿತವು ಕಳೆದ ವರ್ಷ ಅನುಸರಿಸಿದಂತೆ ಈ ಬಾರಿಯೂ ಜಿಲ್ಲೆಯಲ್ಲಿರುವ ಎಲ್ಲಾ ಕಲ್ಯಾಣ ಮಂಟಪ ಶಾಲಾ-ಕಾಲೇಜುಗಳು ಸೇರಿದಂತೆ ವಸತಿ ನಿಲಯಗಳನ್ನು ತಕ್ಷಣ ಕೋವಿಡ್ ತಪಾಸಣೆ ಕೇಂದ್ರಗಳನ್ನಾಗಿ ಪರಿವರ್ತಿಸಬೇಕೆಂದು ಕೆಪಿಸಿಸಿಯ ಕಾರ್ಯದರ್ಶಿ ರಾಜಶೇಖರ್ ಮೆಣಸಿನಕಾಯಿ ಕಾರ್ಮಿಕ ಮುಖಂಡರಾದ ಬಾಬಾಜಾನ್ ಮುಧೋಳ ರವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.