5 ಲಕ್ಷ ರೂ.ದೋಚಿ ಪರಾರಿ

ಕಲಬುರಗಿ.ಏ.21:ಜೇವರ್ಗಿ ಪಟ್ಟಣದ ಬಸವೇಶ್ವರ್ ವೃತ್ತದಲ್ಲಿ ಜನೌಷಧಿಯಲ್ಲಿ ಔಷಧಿ ತೆಗೆದುಕೊಳ್ಳುವ ಸಂದರ್ಭದಲ್ಲಿ ದುಡ್ಡಿನ ಚೀಲ ಕೆಳಗೆ ಇಟ್ಟು ಔಷಧಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಕೆಳಗಡೆ ಇಟ್ಟ ಹಣವನ್ನು ದೋಚಿ ಪರಾರಿಯಾದ ಘಟನೆ ವರದಿಯಾಗಿದೆ.
ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯ ಬಳಿ ಇದ್ದ ಐದು ಲಕ್ಷ ರೂ.ಗಳನ್ನು ಹಾಡಹಗಲೇ ಯಾಮಾರಿಸಿ ದೋಚಿಕೊಂಡು ಹೋದ ಘಟನೆಯು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.
ತಾಲ್ಲೂಕಿನ ಕಲ್ಲಹಂಗರಗಾ ಗ್ರಾಮದ ರೈತ ಬಸವರಾಜ್ ಮಲ್ಲಪ್ಪ ಕುಂಬಾರ್ ಎಂಬ ರೈತನೇ ಹಣ ಕಳೆದುಕೊಂಡ ನತದೃಷ್ಟರಾಗಿದ್ದಾರೆ. ಬಸವೇಶ್ವರ್ ವೃತ್ತದ ಬಳಿ ಇರುವ ಜನೌಷಧಿ ಕೇಂದ್ರಕ್ಕೆ ತೆರಳಿಹಣದ ಬ್ಯಾಗ್ ಕೆಳಗೆ ಇಟ್ಟು ಔಷಧಿ ಖರೀದಿ ಮಾಡುವ ಸಂದರ್ಭದಲ್ಲಿ ಬಂದ ಕಳ್ಳ ಹಣದ ಬ್ಯಾಗ್‍ನೊಂದಿಗೆ ಪರಾರಿಯಾಗಿದ್ದಾನೆ.
ಆರೋಪಿ ಕಳ್ಳತನ ಮಾಡಿಕೊಂಡು ಹೋಗುವ ದೃಶ್ಯ ಸಿ.ಸಿ. ಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಪತ್ತೆಗಾಗಿ ಪೋಲಿಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.