5 ಲಕ್ಷ ಮೌಲ್ಯದ ಗಾಂಜಾ ವಶ:ಇಬ್ಬರ ಬಂಧನ

ವಿಜಯಪುರ,ಮಾ 17: ಅಕ್ರಮವಾಗಿ ಗಾಂಜಾ ಮಾರಾಟ ಮಾಡುವಾಗ ಪೆÇಲೀಸರು ದಾಳಿ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸೋನಕನಹಳ್ಳಿ ಬಳಿ ನಡೆದಿದೆ.
ಮುಕ್ತಿಯಾರ ಅಹ್ಮದ್ ಕೂಡ್ಲೆ, ಸದ್ದಾಂ ಮುಲ್ಲಾ ಬಂಧಿತ ಆರೋಪಿಗಳು. ಖಚಿತ ಮಾಹಿತಿ ಆಧರಿಸಿ ಪೆÇಲೀಸರು ದಾಳಿಗೈದು ಬಂಧಿತರಿಂದ 5 ಲಕ್ಷ ಮೌಲ್ಯದ 70 ಕೆಜಿ ಗಾಂಜಾ ಹಾಗೂ 5 ಲಕ್ಷ ಮೌಲ್ಯದ ಒಂದು ಕಾರು ಜಪ್ತಿ ಮಾಡಿದ್ದಾರೆ. ಈ ಕುರಿತು ವಿಜಯಪುರ ಸಿಇಎನ್ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.