5 ರಾಜ್ಯದ ಫಲಿತಾಂಶ ತೃಪ್ತಿ ತಂದಿದೆ

ದಾವಣಗೆರೆ. ಮೇ.೩;  5 ರಾಜ್ಯಗಳ ಚುನಾವಣಾ ಫಲಿತಾಂಶವು ಭಾರತ ದೇಶದ ಕಾರ್ಮಿಕರ, ರೈತರ ಮತ್ತು ಜಾತ್ಯಾತೀತತೆಯ ಗೆಲುವಾಗಿದೆ. ಜಾತಿ-ಧರ್ಮಗಳ ವಿಭಜನೆ ಮಾಡಿ ಅಧಿಕಾರದ ಗೆದ್ದುಗೆ ಹಿಡಿಯಲು ಸಾಧ್ಯವಿಲ್ಲವೆಂದು ಮತ್ತು ಎಷ್ಟೇ ಶಕ್ತಿಶಾಲಿಯಾಗಿರಲಿ ಕೆಲಸ ಮಾಡಿದವರು ಮಾತ್ರ ಅಧಿಕಾರ ಹಿಡಿಯಲು ಸಾಧ್ಯ ಎಂದು ಅಲ್ಲಿಯ ಜನತೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದು ವಕೀಲ ಅನೀಸ್ ಪಾಷ ಹೇಳಿದರು. ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳಿಗೆ ಮಣಿ ಹಾಕುವುದನ್ನು ಬಿಟ್ಟು, ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಿ ದೇಶದ ಏಕತೆ, ಅಖಂಡತೆ, ಸಮಾನತೆ ಮತ್ತು ಬೆಳವಣಿಗೆಯ ಕಡೆಗೆ ಹೆಚ್ಚು ಒತ್ತುಕೊಡಬೇಕು ಎಂದಿದ್ದಾರೆ.