5 ಮತ್ತು 8ನೇ ತರಗತಿಯ ಮಕ್ಕಳಿಗೆ ಮೌಲ್ಯಾಕನ  ಪರೀಕ್ಷೆ :ಬಿ ಇ ಒ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ 25  ಸರ್ವ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ 5 ಮತ್ತು 8ನೇ ತರಗತಿಯ ಮಕ್ಕಳಿಗೆ ಮೌಲಾಂಕನ ಪರೀಕ್ಷೆ ನಡೆಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂಸಿ ಆನಂದ್ ಹೇಳಿದರು.
 ಪಟ್ಟಣದ ಬಿ ಆರ್ ಸಿ ಕಚೇರಿಯಲ್ಲಿ ಕರೆದ ಪತ್ರಿಕೆಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ 5 ಮತ್ತು 8ನೇ ತರಗತಿಯ  ಕಲಿಕೆ ಗುಣಮಟ್ಟವನ್ನು  ಅಳತೆ ಮಾಡುವ ದೃಷ್ಟಿಯಿಂದ ಮಕ್ಕಳಿಗೆ ಮೌಲಾಂಕನ  ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಫೇಲ್ ಮಾಡುವದಿಲ್ಲ. ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು. 5 ಮತ್ತು 8ನೇ ತರಗತಿಗೆ ವಾರ್ಷಿಕ ಪರೀಕ್ಷೆ ಅಂತ ಇರುವುದಿಲ್ಲ. ಕೇವಲ  ಮೌಲ್ಯಾಂಕನವಾಗಿರುತ್ತದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕೆ ನ್ಯೂನತೆಗಳನ್ನು ನೀಗಿಸುವ ಮತ್ತು ಸರಿಪಡಿಸುವ ದೃಷ್ಟಿಯಿಂದ ಈ ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸದುದ್ದೇಶವಾಗಿದೆ. ಆದ್ದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಭಯಪಡುವ ಅವಶ್ಯಕತೆ ಇರುವುದಿಲ್ಲ. ಆ ಶಾಲೆಯ ತರಗತಿಗಳಲ್ಲಿಯೇ ಮಕ್ಕಳಿಗೆ ಮೌಲಾಂಕನ ಮಾಡಲಾಗುವುದು. 5 ಮತ್ತು 8ನೇ ತರಗತಿಗೆ 128 ಪರೀಕ್ಷೆಯ ಕೇಂದ್ರಗಳನ್ನಾಗಿ ಮಾಡಲಾಗಿದೆ. 5ನೇ ತರಗತಿಯ ಒಟ್ಟು ಮಕ್ಕಳು 4,274, 8ನೇ ತರಗತಿ 3366  ಮಕ್ಕಳು   ಮೌಲಂಕನ ಪರೀಕ್ಷೆಗೆ ಒಳಪಡುತ್ತಾರೆ.
 ಶೀಘ್ರದಲ್ಲಿ ನಡೆಯುವ 10ನೇ ತರಗತಿಯ ಪರೀಕ್ಷೆಗೆ ಕೂಡ ತಯಾರಿ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು 10 ಕೇಂದ್ರಗಳನ್ನಾಗಿ ಮಾಡಲಾಗಿದ್ದು. ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರೀಕ್ಷೆಗೆ ನೋಂದಣಿಯಾದ ವಿದ್ಯಾರ್ಥಿಗಳು ಒಟ್ಟು 2946 ಪರೀಕ್ಷೆ ಬರೆಯಲಿದ್ದಾರೆ ಎಂದರು
 ಈ ಸಂದರ್ಭದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಭಜಂತ್ರಿ, ಸಂಪನ್ಮೂಲ ಅಧಿಕಾರಿ ಪ್ರಭಾಕರ್, ದೈಹಿಕ ಶಿಕ್ಷಣಾಧಿಕಾರಿ ಸಿ. ಕೊಟ್ರೇಶ್ ನೌಕರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ್, ಶಿಕ್ಷಕ ಸಂಘದ ಕಾರ್ಯದರ್ಶಿ ಬಿ. ಕೊಟ್ರಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವ ತನಯ್ಯ, ಇಸಿ ಓ ಶಿವಲಿಂಗ ಸ್ವಾಮಿ, ಬಿ ಆರ್ ಪಿ ಮಂಜುನಾಥ್ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಲ್ಲಪ್ಪ ಇದ್ದರು.