
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03: ನಗರದ 5 ವಾರ್ಡಿನ ವೆಂಕಟರಮಣ ಕಾಲೋನಿ , ಕಾಕರ್ಕ ತೋಟದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಅವರು ತಮ್ಮ ಪುತ್ರ ಶ್ರವಣಕುಮಾರ ರೆಡ್ಡಿ ಜೊತೆ ಸೇರಿ ಮತಯಾಚನೆ ಮಾಡಿದರು. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಅಭಿವೃದ್ಧಿ ಪರಿಗಣಿಸಿ ಬಿಜೆಪಿಗೆ ಮತ ನೀಡಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಬಾಗಿಯಾದ ಬಜ್ಜಯ್ಯ , ಸುಂಕಪ್ಪ , ತಿಮ್ಮಪ್ಪ, ನಾಗರಾಜ್ , ವಾರ್ಡಿನ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರಚಾರದಲ್ಲಿ ಭಾಗಿಯಾಗಿದ್ದರು.