5 ನೇ ವರ್ಷದ ಹಿಂದೂ ಮಹಾಗಣಪತಿ ಉತ್ಸವ ;ವಿಜೃಂಭಣೆಯ ಆಚರಣೆಗೆ ಸಿದ್ಧತೆ

ಸಂಜೆವಾಣಿ ವಾರ್ತೆ

ಹರಿಹರ : ಜು 15  ಹಿಂದೂ ಮಹಾಗಣಪತಿ ಉತ್ಸವವನ್ನು ವಿಜೃಂಭಣೆಯಿಂದ 21 ದಿನಗಳ ಕಾಲ ನಗರದಲ್ಲಿ ಆಚರಣೆ ಮಾಡಲಾಗುವುದು ಎಂದು ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯ ಅಧ್ಯಕ್ಷ ಹಾಗು ನಗರಸಭಾ ಸದಸ್ಯ ಎಬಿಎಂ. ವಿಜಯ್ ಕುಮಾರ್ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ  ಹಿಂದೂ ಜಾಗರಣ ವೇದಿಕೆ ಐದನೇ ವರ್ಷದ  ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯ ವತಿಯಿಂದ ನಡೆದ  ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಸೆ.19 ಅ.8 ರ ವರೆಗೆ 21 ದಿನಗಳ ಕಾಲ ನಗರದ ಪೇಟೆ ಆಂಜನೇಯ ದೇವಸ್ಥಾನದ ಬಳಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಹೇಳಿದರು.ಹಿಂದೂ ಜಾಗರಣ ವೇದಿಕೆಯ ಅಡಿಯಲ್ಲಿ ಆರಂಭಗೊಂಡ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯು ಈ ಬಾರಿ ಐದನೇ ವರ್ಷದ ಗಣೇಶ ಉತ್ಸವವನ್ನು ಆಚರಿಸುತ್ತಿದ್ದು 21 ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುವುದು ಇದಕ್ಕೆ ಹರಿಹರದ ಮಹಾಜನತೆಯು ತನು,ಮನ, ಧನದಿಂದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಕಳೆದ ನಾಲ್ಕು ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ಗಣೇಶೋತ್ಸವವನ್ನು ನಡೆಸುತ್ತಾ ಬಂದಿದ್ದು ಇದಕ್ಕೆ ಹರಿಹರದ ಮಹಾಜನತೆಯೂ ಸಹ ಅತ್ಯಂತ ಸಹಕಾರ ಸಹಾಯವನ್ನು ನೀಡುತ್ತಾ ಬಂದಿದೆ ಅದರಂತೆ ಈ ಬಾರಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಹಾಜನತೆ ಸಹಕಾರ ನೀಡವ ವಿಶ್ವಾಸವಿರುವುದಾಗಿ ತಿಳಿಸಿದರು.ಈ ಬಾರಿಯ ಗಣೇಶೋತ್ಸವವು  ವಿಶೇಷವಾಗಿ ಹಿಂದೂ ಧರ್ಮದ ಎಲ್ಲಾ ಸಮುದಾಯಗಳ ಮುಖಂಡರುಗಳನ್ನು ಪಕ್ಷಾತೀತವಾಗಿ ಆಹ್ವಾನಿಸಿದ್ದು ಎಲ್ಲರ ಸಹಕಾರದೊಂದಿಗೆ ಆಚರಣೆ ಮಾಡುವ ಸಂಕಲ್ಪ ಮಾಡಲಾಗಿದೆ ಇದಕ್ಕೆ ಆ ವಿನಾಯಕನ ಆಶೀರ್ವಾದ ಹಾಗೂ ನಗರದ ಜನತೆಯ ಸಹಕಾರ ದೊರೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾಗಣಪತಿ ಟ್ರಸ್ಟ್ ನ ಅಧ್ಯಕ್ಷ ಬಸವನಗೌಡ,ಉಪಾಧ್ಯಕ್ಷ ಸ್ವಾತಿ ಹನುಮಂತಪ್ಪ, ಕಾರ್ಯದರ್ಶಿ ಎಚ್. ದಿನೇಶ್, ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಗುಡಿಮನಿ, ಕಾರ್ಯದರ್ಶಿ ಎಬಿವಿಪಿ ವೀರೇಶ್ ಅಜ್ಜಣ್ಣನವರ್. ಖಜಾಂಚಿ ಗಿರೀಶ್ ಹಳ್ಳದಕೇರಿ, ಚಂದ್ರಕಾಂತಗೌಡ, ರಾಘವೇಂದ್ರ ಉಪಾಧ್ಯಾಯ, ಮಂಜುನಾಥ, ಚಂದನ್ ಮೂರ್ಕಲ್, ಕಾರ್ತಿಕ್, ಮಹೇಶ್, ಶಿವು ಸೇರಿದಂತೆ ಹಲವು ಹಿಂದೂ ಮುಖಂಡರುಗಳು ಉಪಸ್ಥಿತರಿದ್ದರು.