5 ಕೋ.ರೂ.ರಸ್ತೆ ಸುಧಾರಣಾ ಕಾಮಗಾರಿಗೆ ಚಾಲನೆ

ದೇವರಹಿಪ್ಪರಗಿ:ನ.8:ಕ್ಷೇತ್ರದ ಸಮಗ್ರ ನೀರಾವರಿ ನನ್ನ ಕನಸಾಗಿದ್ದು, ಪ್ರತಿಯೊಬ್ಬ ರೈತರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸಾವಿರಾರು ರೂ. ಅನುದಾನ ತಂದು ಯೋಜನೆ ಜಾರಿಗೊಳಿಸುತ್ತಿರುವೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಇದರ ಜೊತೆಯಲ್ಲಿ ಕ್ಷೇತ್ರದ ಬಹುತೇಕ ರಸ್ತೆಗಳು ಪ್ರಗತಿಯಾಗಿದ್ದು, ಅಧಿಕಾರವಧಿಯಲ್ಲಿ ಪೂರ್ಣಗೊಳಿಸುತ್ತೇನೆ ಎಂದು ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು,

ತಾಲೂಕಿನ ನಿವಾಳಖೇಡ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಸುಧಾರಣೆ ಯೋಜನೆಯಡಿಯಲ್ಲಿ ಸುಮಾರು 5ಕೋಟಿ ರೂ. ಮೊತ್ತದ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಾಸಕನಾದ ಬಳಿಕ ಅಧಿಕಾರಕ್ಕೆ ಜೋತು ಬೀಳದೆ ಮುಖ್ಯಮಂತ್ರಿಗಳು, ಪ್ರತಿಯೊಬ್ಬ ಸಚಿವರ ಬಳಿ ತೆರಳಿ ಅನುದಾನ ತಂದು ಅಭಿವೃದ್ಧಿಗಾಗಿ ಶ್ರಮಿಸಿರುವೆ. ವಿಶೇಷವಾಗಿ ಈ ಭಾಗದ ರೈತರ ಸಂಕಷ್ಟಕ್ಕೆ ದ್ವನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದನೆ. ಸಾವಿರಾರು ಹೆಕ್ಟರೆ ಭೂಮಿ ನೀರಾವರಿಯಾಗಲು ಕಂಕಣಬದ್ಧನಾಗಿರುವೆ. ಜೊತೆಯಲ್ಲಿ ರೈತರ ಕಬ್ಬು ನುರಿಸುವ ಸಲುವಾಗಿ ಮನಾಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಮೀಣ ಭಾಗದ ರಸ್ತೆಗಳು ಪ್ರಗತಿಯಲ್ಲಿದ್ದು, ಇನ್ನು ಹೆಚ್ಚಿನ ಅನುದಾನ ತಂದು ಕಾರ್ಯನಿರ್ವಹಿಸುವೆ ಎಂದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಬಿನಾಳ, ಮುಖಂಡರಾದ ಶ್ರೀಮಂತ ತಳವಾರ, ಬಸವರಾಜ ಕಲ್ಲೂರ, ಸಿದ್ದು ಬುಳ್ಳಾ, ರಮೇಶ ದಳವಾಯಿ ಮಾತನಾಡಿ ನಮ್ಮ ಶಾಸಕರು ಇಡೀ ಜಿಲ್ಲೆಯಲ್ಲಿಯೇ ಅಧಿಕ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಹಳ್ಳಿಗಳಿಗೆ ಕೋಟಿಗಟ್ಟಲೇ ಅನುದಾನ ನೀಡಿ ಅಭಿವೃದ್ಧಿ ಪಡಿಸಿದ್ದಾರೆ. ಕ್ಷೇತ್ರದ ಬುಹತೇಕ ಕೆರೆಗಳನ್ನು ತುಂಬಿ ಅನುಕೂಲ ಮಾಡಿಕೊಟ್ಟಿದ್ದಾರೆ. ಯಾವುದೇ ಸಮಯದಲ್ಲಿ ಯಾರು ಬೇಕಾದರೂ ಹೋದರೂ ನಮ್ಮ ಶಾಸಕರು ಸ್ಪಂದಿಸಿ ಕೆಲಸ ಮಾಡಿಕೊಡುತ್ತಾರೆ. ಮುಂಬರುವ ಚುನಾವಣೆಯಲ್ಲಿ ನಾವೆಲ್ಲ ಸೇರಿ ಮತ್ತೇ ಶಾಸಕರ ಕೈ ಬಲ ಪಡಿಸೋಣ ಶಾಸಕರು ಮಾಡುವ ಉತ್ತಮ ಕಾರ್ಯಗಳನ್ನು ಮನೆ ಮನೆಗೂ ತಲುಪಿಸೋಣ ಎಂದರು. ಕಾರ್ಯಕ್ರಮದಲ್ಲಿ ಅಜೀಜ ಯಲಗಾರ, ಸುರೇಶಗೌಡ ಬಿರಾದಾರ, ಸಂಗನಗೌಡ ಬಿರಾದಾರ ನೀರಾವರಿ, ವಿದ್ಯಾದರ ಸಂಗೋಗಿ, ವಿಠ್ಠಲ ಬಂಠನೂರ, ನಿಂಗಪ್ಪ ಪೂಜಾರಿ, ಶಂಕರಗೌಡ ಪಾಟೀಲ, ಬಸಣ್ಣ ಮಸೂತಿ, ರಾವುತಪ್ಪ ದಳವಾಯಿ, ಚಿದಾನಂದ ದಳವಾಯಿ, ಪರಶು ಮೇಲಿನಮನಿ, ಸೇರಿದಂತೆ ರೈತರು, ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.