5 ಅಭ್ಯರ್ಥಿಗಳಿಂದ ನಾಮ ಪತ್ರ ಸಲ್ಲಿಕೆ

ಮಾಲೂರು ಏ೧೮:ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಮೂರನೇ ದಿನವಾದ ಸೋಮವಾರ ಕಾಂಗ್ರೆಸ್ ಒಂದು ಜೆಡಿಎಸ್ ಒಂದು ಬಿಜೆಪಿ ಒಂದು ಪಕ್ಷೇತರ ಎರಡು ಸೇರಿದಂತೆ ಒಟ್ಟು ಐದು ಮಂದಿ ಅಭ್ಯರ್ಥಿಗಳು ಚುನಾವಣಾಧಿಕಾರಿ ಕುಮಾರಸ್ವಾಮಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿ ತಹಶೀಲ್ದಾರ್ ಕೆ ರಮೇಶ್ ಅವರಿಗೆ ನಾಮಪತ್ರಗಳನ್ನು ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಮೂರನೇ ದಿನ ಕಾಂಗ್ರೆಸ್ ಪಕ್ಷದಿಂದ ಹಾಲಿ ಶಾಸಕ ಕೆ.ವೈ ನಂಜೇಗೌಡ, ಜೆಡಿಎಸ್ ಪಕ್ಷದಿಂದ ಜಿಇ ರಾಮೇಗೌಡ, ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ಕೆ ಎಸ್ ಮಂಜುನಾಥ್ ಗೌಡ, ಪಕ್ಷೇತರ ಅಭ್ಯರ್ಥಿಗಳಾಗಿ ರಶ್ಮಿ ರಾಮೇಗೌಡ, ನಾರಾಯಣಮ್ಮ, ಚುನಾವಣಾ ಅಧಿಕಾರಿ ಕುಮಾರಸ್ವಾಮಿಯವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಮಾಜಿ ಶಾಸಕ ಕೆ ಎಸ್ ಮಂಜುನಾಥ್ ಅವರು ಬಿಜೆಪಿ ಪಕ್ಷದಿಂದ ಶುಭ ದಿನವಾದ ಸೋಮವಾರ ತನ್ನ ಪತ್ನಿ ಆರಿದ್ರ ಮಂಜುನಾಥ್ ಹಾಗೂ ಬೆಂಬಲಿಗರೊಂದಿಗೆ ತಾಲೂಕು ಕಚೇರಿಯ ಚುನಾವಣಾ ಅಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.
ಏಪ್ರಿಲ್ ೧೯ರ ಬುದುವಾರ ಮಾಜಿ ಶಾಸಕ ಕೆ ಎಸ್ ಮಂಜುನಾಥ್ ಅವರು ಬಿಜೆಪಿ ಪಕ್ಷದಿಂದ ಬೆಂಬಲಿಗರು ಹಾಗೂ ಅಪಾರ ಜನಸ್ಥೋಮದೊಂದಿಗೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಪುರಸಭಾ ಮಾಜಿ ಅಧ್ಯಕ್ಷ ನೀಲಚಂದ್ರ, ಆರಿದ್ರ ಮಂಜುನಾಥಗೌಡ, ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಮುಖಂಡ ಅಗ್ರೀನಾರಾಯಣಪ್ಪ, ಇದ್ದರು.