5ಸ್ಟಾರ್‌ ರೇಟಿಂಗ್‌’ ಪುರಸ್ಕಾರ

ಚಿತ್ರದುರ್ಗ.ನ.೨೫: ನಿರಂತರ ಗಣಿಗಾರಿಕೆಗಾಗಿ ಪ್ರಯತ್ನಿಸುತ್ತಿರುವ ಮತ್ತು ಮುಂದಾಳತ್ವ ವಹಿಸುತ್ತಿರುವ ಗಣಿ ಕಂಪನಿಗಳಿಗೆ ಕೇಂದ್ರ ಸರ್ಕಾರ ನೀಡುವ ‘5ಸ್ಟಾರ್‌ ರೇಟಿಂಗ್‌’ ಪುರಸ್ಕಾರವು ಆರ್‌.ಪ್ರವೀಣ್‌ ಚಂದ್ರ ಒಡೆತನದ ‘ಜಾನ್‌ಮೈನ್ಸ್‌’ಗೆ ಸಿಕ್ಕಿದೆ.ನವದೆಹಲಿಯಲ್ಲಿ  ನಡೆದ ಸಮಾರಂಭದಲ್ಲಿ ಕೇಂದ್ರದ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಷಿ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು.2017-18, 2018-19 ಹಾಗೂ 2019-20 ನೇ ಸಾಲಿನಲ್ಲಿ ಅತ್ಯುತ್ತಮ ಗಣಿಗಾರಿಕೆ ನಡೆಸಿದ ಕಂಪನಿಗಳಿಗೆ ಈ ಪ್ರಶಸ್ತಿ ನೀಡಲಾಯಿತು. ಸುಸ್ಥಿರ ಗಣಿಗಾರಿಕೆ ನಡೆಸಿದ ದೇಶದ 84 ಕಂಪನಿಯ 143 ಗಣಿಗಳು ಈ ಪುರಸ್ಕಾರಕ್ಕೆ ಭಾಜನವಾಗಿವೆ.ಇಆರ್‌ಎಂ ಸಮೂಹ ಸಂಸ್ಥೆಗಳ ಅಧ್ಯಕ್ಷ ಆರ್‌.ಪ್ರವೀಣ್‌ ಚಂದ್ರ, ಹಿರಿಯ ಪ್ರಧಾನ ವ್ಯವಸ್ಥಾಪಕ ಧನಂಜಯ ಜಿ.ರೆಡ್ಡಿ, ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್‌.ರಣದೀವೆ, ವ್ಯವಸ್ಥಾಪಕ ಸಿ.ಎ.ದೀಪಕ್ ಇದ್ದರು.

Attachments area