5ಸಿಬಿಎಸ್‍ಸಿ ಶಾಲೆ ಆರಂಭ-ಚಿಕ್ಕರೇವಣ್ಣ

ರಾಮದುರ್ಗ, ನ 1- ತಾಲೂಕಿನ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡಲು ನಾಲ್ಕು ಹೋಬಳಿಗಳಿಗೊಂದರಂತೆ ಮತ್ತು ರಾಮದುರ್ಗದಲ್ಲಿ ಒಂದು ಸೇರಿದಂತೆ ಒಟ್ಟು 5 ಸಿಬಿಎಸ್‍ಸಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಬೆಂಗಳೂರಿನ ಉದ್ಯಮಿ ಚಿಕ್ಕರೇವಣ್ಣ ಅವರು ಹೇಳಿದರು.
ತಾಲೂಕಿನ ಚುಂಚನೂರಿನ ಜನ ಕಳೆದ ತಿಂಗಳು ನಡೆದ ಅಪಘಾತದಲ್ಲಿ ಮರಣ ಹೊಂದಿದ 9 ಕುಟುಂಬಗಳಿಗೆ ತಲಾ ರೂ. 15 ಸಾವಿರ ಹಾಗೂ ಗಾಯಾಳು ಕುಟುಂಬಗಳಿಗೆ ರೂ. 10 ಸಾವಿರದಂತೆ ಧನ ಸಹಾಯ ಮಾಡಿದ ನಂತರ ಅನೌಪಚಾರಿಕವಾಗಿ ಮಾತನಾಡಿದ ಅವರು, ಸಿಬಿಎಸ್‍ಸಿ ಶಾಲೆಗಳನ್ನು ಆರಂಭಿಸಲು ಎರಡು ಹೋಬಳಿಗಳಲ್ಲಿ ಜಮೀನು ಕೂಡ ಖರೀದಿ ಮಾಡಲಾಗಿದೆ ಎಂದು ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಬೆಂಗಳೂರಿನ ಜನರಿಗೆ ಸಾಮಗ್ರಿಗಳನ್ನು ಪೂರೈಸಲು ರೂ. 2.5 ಕೋಟಿ ವೆಚ್ಚ ಮಾಡಲಾಗಿದೆ. ಬೆಂಗಳೂರಿನ ಬಡವರಿಗಿಂತ ಹಿಂದುಳಿದ ತಾಲ್ಲೂಕು ರಾಮದುರ್ಗದ ಬಡವರಿಗೂ ಸಹಾಯ ಮಾಡಲಾಗುವುದು ಎಂದು ಹೇಳಿದರು.
ಸಾಕಷ್ಟು ಮಕ್ಕಳು ಉತ್ತೇಜನ ಇಲ್ಲದೇ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಎಲ್ಲ ಸಮಾಜದ ಸುಮಾರು 1 ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಪೆÇ್ರೀತ್ಸಾಹಿಸಲಾಗುವುದು. ತಲಾ ರೂ. 1 ಸಾವಿರ ಧನ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.
ಬಡವರಿಗೆ ಸಹಾಯ ಮಾಡಲು ತಮ್ಮ ಹತ್ತಿರ ಸಾಕಷ್ಟು ಹಣ ಇದೆ. ಅಷ್ಟಾಗಿಯೂ ಬಡವರಿಗೆ ಸಹಾಯ ಮಾಡಲು ಜನ ಬಯಸಿದರೆ ರಾಜಕೀಯ ಪ್ರವೇಶ ಮಾಡಲು ಉದ್ದೇಶ ಹೊಂದಲಾಗಿದೆ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಕೆಪಿಎಸ್‍ಸಿ ಮಾಜಿ ಸದಸ್ಯ ಕೆ. ಮುಕುಡಪ್ಪ, ದಲಿತ ನಾಯಕ ಬಿ.ಆರ್. ದೊಡಮನಿ, ಕುರುಬ ಸಮಾಜ ಮುಖಂಡ ಜಗದೀಶ ಕಾಮನ್ನವರ, ಹನಮಂತ ನರಗುಂದ ಇದ್ದರು. ಜಾಲಿಕಟ್ಟಿ ಮಠದ ಶ್ರೀಗಳು ಹಾಜರಿದ್ದರು.