5ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಸೋಮಶೇಖರ್ ರೆಡ್ಡಿ ಚಾಲನೆ

ಬಳ್ಳಾರಿ, ಡಿ.24- ನಗರದ ಸತ್ಯನಾರಾಯಣ ಪೇಟೆಯ ಜೈನ್ ದೇವಸ್ಥಾನದ ಮುಂಭಾಗದ ರಸ್ತೆ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಯ ಭೂಮಿ ಪೂಜೆ ಮಾಡುವ ಮುಖಾಂತರ ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರು ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸರ್ಕಲ್ ಚಂದ್ ಬಾಗಿರಾಚ್, ರಾಬಕೊ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರ್ ರೆಡ್ಡಿ, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ತಿಮ್ಮಾರೆಡ್ಡಿ ಅನಿಲ್ ಜೈನ್, ದಿವಾಕರ್, ಅಶೋಕ್, ಡಾ. ವಿದ್ಯಾಧರ್ಕ್ ಕಿನ್ನಾಳ್, ಡಾ. ಜೈನ್, ಪದ್ಮಾವತಿ ಹಾಗೂ ಇನ್ನಿತರ ಮುಖಂಡರುಗಳು ಇದ್ದರು.